ಭಾರತದ ಜೈಲಿನಲ್ಲಿ ಸಹಿಸಲಸಾಧ್ಯ ಉಷ್ಣತೆ ಎಂದ ಮಲ್ಯ: ಗಡಿಪಾರು ಪ್ರಶ್ನಿಸಿ ಮೇಲ್ಮನವಿಗೆ ಅನುಮತಿ

Update: 2019-07-02 17:01 GMT

ಲಂಡನ್, ಜು. 2: ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಲು ಆದೇಶ ನೀಡುವ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ಮಲ್ಯಗೆ ಅನುಮತಿ ನೀಡಿದೆ.

 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಮತ್ತು ಕಪ್ಪು ಹಣ ಬಿಳುಪು ಆರೋಪದಲ್ಲಿ ವಿಚಾರಣೆ ಎದುರಿಸಲು ವಿಜಯ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಿ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಹೊರಡಿಸಿದ ಆದೇಶದ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.

ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್‌ನ ಇಬ್ಬರು ನ್ಯಾಯಾಧೀಶರ ಪೀಠವೊಂದು ಎಪ್ರಿಲ್‌ನಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿತು.

ಇನ್ನು ಈ ಪ್ರಕರಣದ ಪೂರ್ಣ ವಿಚಾರಣೆಯು ಬ್ರಿಟನ್ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಮಧ್ಯ ಏಶ್ಯದ ವಲಸಿಗರನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರಕ್ಕೆ ನೆರವು ನೀಡುವ ಉದ್ದೇಶದ 4.6 ಬಿಲಿಯ ಡಾಲರ್ ನೆರವು ಪ್ಯಾಕೇಜ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News