ಪಿಎನ್‌ಬಿ ವಂಚನೆ: ನೀರವ್ ಮೋದಿ ಸೋದರಿಯ ಬ್ಯಾಂಕ್ ಠೇವಣಿಯ ಸ್ತಂಭನಕ್ಕೆ ಸಿಂಗಾಪುರ ಹೈಕೋರ್ಟ್‌ ಆದೇಶ

Update: 2019-07-02 17:14 GMT

ಹೊಸದಿಲ್ಲಿ,ಜು.2: ಜಾರಿ ನಿರ್ದೇಶನಾಲಯ(ಈ.ಡಿ.)ದ ಮನವಿಯ ಮೇರೆಗೆ ಸಿಂಗಾಪುರದ ಉಚ್ಚ ನ್ಯಾಯಾಲಯವು ಪಿಎನ್‌ ಬಿ ವಂಚನೆ ಹಗರಣದ ಆರೋಪಿ ನೀರವ ಮೋದಿಯ ಸೋದರಿ ಮತ್ತು ಬಾವನಿಗೆ ಸೇರಿದ 6.122 ಮಿಲಿಯನ್ ಡಾ.(44.41 ಕೋ.ರೂ.) ಬ್ಯಾಂಕ್ ಠೇವಣಿಗಳನ್ನು ಸ್ತಂಭನಗೊಳಿಸುವಂತೆ ಆದೇಶಿಸಿದೆ.

ಠೇವಣಿಗಳು ಬ್ರಿಟಿಷ್ ವರ್ಜಿನ್ ಐಲಂಡ್ಸ್‌ನಲ್ಲಿರುವ ಪೆವಿಲಿಯನ್ ಪಾಯಿಂಟ್ ಕಾರ್ಪೊರೇಷನ್‌ನ ಹೆಸರಿನಲ್ಲ್ಲಿದ್ದು,ಮೋದಿಯ ಸೋದರಿ ಪುರ್ವಿ ಮತ್ತು ಭಾವ ಮಯಾಂಕ ಮೆಹ್ತಾ ಕಂಪನಿಯ ಒಡೆತನವನ್ನು ಹೊಂದಿದ್ದಾರೆ ಎಂದು ಈ.ಡಿ.ಮಂಗಳವಾರ ತಿಳಿಸಿದೆ.

ಮೋದಿ ಸದ್ಯ ಲಂಡನ್‌ನಲ್ಲಿ ಬಂಧನದಲ್ಲಿದ್ದು,ಆತನನ್ನು ಸ್ವದೇಶಕ್ಕೆ ಗಡಿಪಾರುಗೊಳಿಸಲು ಭಾರತವು ಪ್ರಯತ್ನಿಸುತ್ತಿದೆ.

 ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಸ್ವಿಟ್ಝರ್‌ಲ್ಯಾಂಡ್‌ನ ಅಧಿಕಾರಿಗಳು ಒಟ್ಟು 283.16 ಕೋ.ರೂ.ಗಳ ಠೇವಣಿಗಳನ್ನು ಹೊಂದಿರುವ ಮೋದಿಯ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News