ಹೆಲಿಕಾಪ್ಟರ್ ಪತನ: ಬಿಲಿಯಾಧೀಶ ಉದ್ಯಮಿ ಸೇರಿದಂತೆ 7 ಮಂದಿ ಮೃತ್ಯು

Update: 2019-07-05 17:08 GMT

ವಾಶಿಂಗ್ಟನ್, ಜು. 5: ಬಹಾಮಸ್ ದ್ವೀಪ ರಾಷ್ಟ್ರದ ಸಮುದ್ರದಲ್ಲಿ ಹೆಲಿಕಾಪ್ಟರೊಂದು ಪತನಗೊಂಡಿದ್ದು, ಅಮೆರಿಕದ ಬಿಲಿಯಾಧೀಶ ಕಲ್ಲಿದ್ದಲು ಉದ್ಯಮಿ ಕ್ರಿಸ್ ಕ್ಲೈನ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ದೇಶದ ಉತ್ತರ ಭಾಗದಲ್ಲಿ ಗುರುವಾರ ಮುಂಜಾನೆ ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸಿತು ಎಂದು ‘ನಾಸೌ ಗಾರ್ಡಿಯನ್’ ಪತ್ರಿಕೆ ಪ್ರವಾಸೋದ್ಯಮ ಮತ್ತು ವಾಯುಯಾನ ಸಚಿವರನ್ನು ಉಲ್ಲೇಖಿಸಿ ವರದಿ ಮಾಡಿದೆ.

‘‘ಹೆಲಿಕಾಪ್ಟರನ್ನು ನಾವು ಪತ್ತೆಹಚ್ಚಿದ್ದೇವೆ. ಅದರಲ್ಲಿದ್ದ ಏಳು ಪ್ರಯಾಣಿಕರು ಈಗಲೂ ಅಲ್ಲೇ ಇದ್ದಾರೆ’’ ಎಂದು ಸಚಿವ ಡಿಯೊನಿಸಿಯೊ ಡಿ’ಆಗ್ವಿಲರ್ ಹೇಳಿದ್ದಾರೆ.

ಹೆಲಿಕಾಪ್ಟರ್ ಬಹಾಮಸ್‌ನಿಂದ ಫ್ಲೋರಿಡದ ಫೋರ್ಟ್ ಲಾಡರ್‌ಡೇಲ್‌ಗೆ ಹಾರುತ್ತಿತ್ತು ಎನ್ನಲಾಗಿದೆ.

 61 ವರ್ಷದ ಕ್ರಿಸ್ ಕ್ಲೈನ್ 1.9 ಬಿಲಿಯ ಡಾಲರ್ (13,000 ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News