ಟ್ಯುನೀಶಿಯದಲ್ಲಿ ಮುಖ ಮುಚ್ಚುವ ನಿಖಾಬ್ ನಿಷೇಧ

Update: 2019-07-05 17:26 GMT

ಟ್ಯೂನಿಸ್, ಜು. 5: ಸಾರ್ವಜನಿಕ ಸಂಸ್ಥೆಗಳಲ್ಲಿ ಮುಖ ಮುಚ್ಚುವ ನಿಖಾಬ್ ಧರಿಸುವುದನ್ನು ‘ಭದ್ರತಾ ಕಾರಣಗಳಿಗಾಗಿ’ ಟ್ಯುನೀಶಿಯ ಪ್ರಧಾನಿ ಯೂಸುಫ್ ಶಾಹಿದ್ ನಿಷೇಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಭಯೋತ್ಪಾದಕನೊಬ್ಬ ಮಂಗಳವಾರ ರಾಜಧಾನಿ ಟ್ಯೂನಿಸ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅದು ಒಂದು ವಾರದ ಅವಧಿಯಲ್ಲಿ ನಡೆದ ಮೂರನೇ ಭಯೋತ್ಪಾದಕ ದಾಳಿಯಾಗಿತ್ತು. ದೇಶವು ಚುನಾವಣೆಗೆ ಸಮೀಪವಾಗುತ್ತಿರುವ ಹಂತದಲ್ಲಿ ಹಾಗೂ ಪ್ರವಾಸೋದ್ಯಮದ ಉಛ್ರಾಯ ಅವಧಿಯಲ್ಲಿ ದಾಳಿಗಳು ನಡೆಯುತ್ತಿವೆ. ಪ್ರವಾಸೋದ್ಯಮದ ಉಛ್ರಾಯ ಸ್ಥಿತಿಯಲ್ಲಿ ಟ್ಯುನೀಶಿಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ಎಲ್ಲ ಮೂರು ಭಯೋತ್ಪಾದಕ ದಾಳಿಗಳ ಹೊಣೆಯನ್ನು ಐಸಿಸ್ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News