ಬ್ರಿಟನ್ ಉಗ್ರ ನಿಗ್ರಹ ಪೊಲೀಸರಿಂದ ಇಬ್ಬರು ಸಿಖ್ಖರ ಬಂಧನ

Update: 2019-07-05 17:31 GMT

 ಲಂಡನ್, ಜು. 5: ಬ್ರಿಟನ್‌ನ ಭಯೋತ್ಪಾದನೆ ನಿಗ್ರಹ ಪೊಲೀಸರು ಸಿಖ್ ಯುವ ಸಂಘಟನೆಯೊಂದಿಗೆ ನಂಟು ಹೊಂದಿರುವ ಇಬ್ಬರನ್ನು ಬಂಧಿಸಿದ್ದಾರೆ.

‘ಸಿಖ್ ಯೂತ್ ಯುಕೆ’ಯ ಸಮಾಜಸೇವೆ ನಿಧಿಯಲ್ಲಿ ನಡೆದಿದೆಯೆನ್ನಲಾದ ವಂಚನೆಗೆ ಸಂಬಂಧಿಸಿ ಈ ಬಂಧನ ನಡೆದಿದೆ.

38 ವರ್ಷದ ಓರ್ವ ಪುರುಷ ಮತ್ತು 49 ವರ್ಷದ ಓರ್ವ ಮಹಿಳೆಯನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಹೇಳಿದ್ದಾರೆ.

ಸಿಖ್ ಯೂತ್ ಯುಕೆಯು ಸಮಾಜಸೇವೆ ನಿಧಿಗೆ ಪಡೆದ ದೇಣಿಗೆಗಳು ಮತ್ತು ಅವುಗಳ ಬಳಕೆಯ ಬಗ್ಗೆ ಬ್ರಿಟನ್‌ನ ಚಾರಿಟಿ ಆಯೋಗ ತನಿಖೆ ನಡೆಸುತ್ತಿದೆ. ಸಮಾಜಸೇವೆ ನಿಧಿ ಬಳಕೆಯ ಬಗ್ಗೆ ಹಲವಾರು ಆತಂಕಗಳು ವ್ಯಕ್ತವಾಗಿದ್ದವು.

ಸಿಖ್ ಯೂತ್ ಯುಕೆ ನೋಂದಾಯಿತ ಸಮಾಜಸೇವೆ ಸಂಸ್ಥೆಯಾಗಿಲ್ಲ. ಆದರೆ, ಅದಕ್ಕೆ ಬರುವ ನಿಧಿಗಳ ಮೇಲೆ ಸರಕಾರ ನಿಗಾ ಇಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News