ಮುಂದಿನ ಹಂತದಲ್ಲಿ ಮನುಷ್ಯರ ಎಚ್‌ಐವಿಗೆ ಚಿಕಿತ್ಸೆ: ವಿಜ್ಞಾನಿಗಳು

Update: 2019-07-05 17:37 GMT

ವಾಶಿಂಗ್ಟನ್, ಜು. 5: ಇಲಿಗಳ ಡಿಎನ್‌ಎಯಿಂದ ಏಡ್ಸ್ ಕಾಯಿಲೆಗೆ ಕಾರಣವಾಗುವ ಎಚ್‌ಐವಿ ವೈರಸನ್ನು ತಾವು ತೆಗೆದಿರುವುದಾಗಿ ಸಂಶೋಧಕರು ಹೇಳಿದ್ದಾರೆ. ಇದು ಈವರೆಗೆ ಮರೀಚಿಕೆಯಾಗಿದ್ದ ಏಡ್ಸ್ ಚಿಕಿತ್ಸೆಯ ಆರಂಭಿಕ ಹಂತವಾಗಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೆಂಪಲ್ ವಿಶ್ವವಿದ್ಯಾನಿಲಯ ಮತ್ತು ನೆಬ್ರಾಸ್ಕ ಮೆಡಿಕಲ್ ಸೆಂಟರ್ ವಿಶ್ವವಿದ್ಯಾನಿಲಯಗಳ 30ಕ್ಕೂ ಅಧಿಕ ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ತೊಡಗಿದ್ದರು.

ವಂಶವಾಹಿಯಲ್ಲಿ ಮಾರ್ಪಾಡುಗಳನ್ನು ಮಾಡುವ ಸಾಮರ್ಥ್ಯವುಳ್ಳ ಸಿಆರ್‌ಐಎಸ್‌ಪಿಆರ್ ಎಂಬ ಸಾಧನ ಮತ್ತು ವೈರಸ್ ನಿಗ್ರಹ ಔಷಧವೊಂದರ ಬೆರಕೆಯಿಂದ ಈ ಸಾಧನೆಯನ್ನು ಮಾಡಲಾಗಿದೆ.

23 ಇಲಿಗಳ ನಿರೋಧಕ ವ್ಯವಸ್ಥೆಯು ಮಾನವರ ನಿರೋಧಕ ವ್ಯವಸ್ಥೆಯನ್ನು ಹೋಲುವಂತೆ ಮಾರ್ಪಾಡುಗಳನ್ನು ಮಾಡಲಾಗಿತ್ತು. ಈ ಪೈಕಿ ಒಂಬತ್ತು ಇಲಿಗಳ ಎಚ್‌ಐವಿಯನ್ನು ಸಂಶೋಧಕರು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News