ಶತಕ ಸಿಡಿಸಿದ ಲೋಕೇಶ್ ರಾಹುಲ್

Update: 2019-07-06 16:52 GMT

ಲೀಡ್ಸ್, ಜು.6: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಲೋಕೇಶ್ ರಾಹುಲ್ ಅವರು ಶ್ರೀಲಂಕಾ ವಿರುದ್ಧ ವಿಶ್ವಕಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಶತಕಗಳನ್ನು ದಾಖಲಿಸಿದ್ದಾರೆ.

ರೋಹಿತ್ ವಿಶ್ವಕಪ್‌ನಲ್ಲಿ 5ನೇ ಶತಕ ದಾಖಲಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 27ನೇ ಶತವಾಗಿದೆ. ರಾಹುಲ್ ವಿಶ್ವಕಪ್‌ನಲ್ಲಿ ಮೊದಲ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 2ನೇ ಶತಕ ದಾಖಲಿಸಿದರು.

ಗೆಲುವಿಗೆ 265 ರನ್‌ಗಳ ಸವಾಲನ್ನು ಪಡೆದ ಭಾರತ 41 ಓವರ್ ಓವರ್‌ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟದಲ್ಲಿ 244ರನ್ ಗಳಿಸಿದೆ. ರಾಹುಲ್ 111 ರನ್ ಮತ್ತು ನಾಯಕ ಕೊಹ್ಲಿ 25 ರನ್ ಗಳಿಸಿ ಆಡುತ್ತಿದ್ದಾರೆ.

ರೋಹಿತ್ ಶರ್ಮಾ 103 ರನ್(94ಎ, 14ಬೌ,2ಸಿ) ಗಳಿಸಿ ಔಟಾಗಿದ್ದಾರೆ. ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 189 ರನ್‌ಗಳ ಜೊತೆಯಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News