ಔಷಧಗಳಿಗೆ ಎಲ್ಲ ದೇಶಗಳಿಗಿಂತ ಕಡಿಮೆ ಹಣ ಪಾವತಿ ಸಿದ್ಧಗೊಳ್ಳುತ್ತಿರುವ ಸರಕಾರಿ ಆದೇಶ: ಟ್ರಂಪ್

Update: 2019-07-06 16:54 GMT

ವಾಶಿಂಗ್ಟನ್, ಜು. 6: ಅಮೆರಿಕದ ಔಷಧಿ ದರಗಳನ್ನು ಜಗತ್ತಿನಲ್ಲೇ ಕನಿಷ್ಠಗೊಳಿಸುವ ಉದ್ದೇಶದ ಸರಕಾರಿ ಆದೇಶವೊಂದನ್ನು ತನ್ನ ಸರಕಾರ ಸಿದ್ಧಪಡಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

‘‘ನಾವು ‘ಫೇವರ್ಡ್ ನೇಶನ್ಸ್’ ಕಾನೂನೊಂದನ್ನು ರೂಪಿಸುತ್ತಿದ್ದೇವೆ. ಇದರ ಪ್ರಕಾರ ನಿರ್ದಿಷ್ಟ ಔಷಧಿಗೆ ಜಗತ್ತಿನಲ್ಲಿ ಯಾವ ದೇಶದಲ್ಲಿ ಅತಿ ಕಡಿಮೆ ಬೆಲೆಯಿದೆಯೋ ಆ ಬೆಲೆಯನ್ನು ನಾವು ಪಾವತಿಸುತ್ತೇವೆ’’ ಎಂದು ಶ್ವೇತಭವನದ ದಕ್ಷಿಣದ ಹುಲ್ಲು ಹಾಸಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ನಿಮಗೆ ಗೊತ್ತಿರುವಂತೆ, ಹಲವಾರು ವರ್ಷಗಳಿಂದ ಇತರ ದೇಶಗಳು ಔಷಧಿಗಳಿಗೆ ನಾವು ಕೊಡುವುದಕ್ಕಿಂತ ತುಂಬಾ ಕಡಿಮೆ ಹಣ ಕೊಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಇದು 60 ಶೇಕಡ, 70 ಶೇಕಡದಷ್ಟೂ ಕಡಿಮೆಯಾಗಿರುತ್ತದೆ’’ ಎಂದರು.

‘‘ಕೆನಡ ಮುಂತಾದ ಇತರ ದೇಶಗಳು ನಾವು ಕೊಡುವುದಕ್ಕಿಂತ ತೀರಾ ಕಡಿಮೆ ಹಣ ಯಾಕೆ ಕೊಡಬೇಕು?’’ ಎಂಬುದಾಗಿ ಟ್ರಂಪ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News