ಜಪಾನ್: ಶಿಂಝೊ ಅಬೆ ಮಿತ್ರಕೂಟಕ್ಕೆ ಬಹುಮತ
Update: 2019-07-06 22:49 IST
ಟೋಕಿಯೊ, ಜು. 6: ಈ ತಿಂಗಳು ಜಪಾನ್‌ನ ಮೇಲ್ಮನೆಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರಧಾನಿ ಶಿಂರೊ ಅಬೆಯ ಆಡಳಿತಾರೂಢ ಮಿತ್ರಕೂಟ ಭರ್ಜರಿ ವಿಜಯವನ್ನು ದಾಖಲಿಸುವತ್ತ ಮುನ್ನಡೆಯುತ್ತಿದೆ ಹಾಗೂ ಇದು ಅಬೆಯ ಪ್ರಧಾನಿ ಸ್ಥಾನವನ್ನು ಬಲಪಡಿಸುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಮೇಲ್ಮನೆಯ 124 ಸ್ಥಾನಗಳಿಗೆ ಜುಲೈ 21ರಂದು ನಡೆಯಲಿರುವ ಚುನಾವಣೆಯಲ್ಲಿ ಅಬೆಯ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಮತ್ತು ಅದರ ಮಿತ್ರ ಪಕ್ಷ ಕೊಮೈಟೊ 63ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿವೆ ಎಂದು ತನ್ನ ಸಮೀಕ್ಷೆ ತಿಳಿಸಿದೆ ಎಂದು ‘ಕ್ಯೋಡೊ ನ್ಯೂಸ್’ ವರದಿ ಮಾಡಿದೆ.
ಚುನಾವಣೆಯಲ್ಲಿ ಆಡಳಿತಾರೂಢ ಮಿತ್ರಕೂಟವು ಸುಲಭವಾಗಿ ಬಹುಮತವನ್ನು ಗಳಿಸಲಿವೆ ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ‘ಅಸಾಹಿ ಶಿಂಬುನ್’ ಮತ್ತು ಇತರ ಪತ್ರಿಕೆಗಳೂ ಹೇಳಿವೆ.