ಶ್ರೀಲಂಕಾ ಬಂದರುಗಳಿಗೆ ಅಮೆರಿಕ ಸೈನಿಕರಿಗೆ ಪ್ರವೇಶವಿಲ್ಲ: ಸಿರಿಸೇನ

Update: 2019-07-06 17:32 GMT

ಕೊಲಂಬೊ, ಜು. 6: ಅಮೆರಿಕದ ಸೈನಿಕರಿಗೆ ಶ್ರೀಲಂಕಾದ ಬಂದರುಗಳಿಗೆ ಮುಕ್ತ ಪ್ರವೇಶ ಕಲ್ಪಿಸುವ ಪ್ರಸ್ತಾಪಿತ ಸೇನಾ ಒಪ್ಪಂದವನ್ನು ನನ್ನ ಸರಕಾರ ಅಂತಿಮಗೊಳಿಸಲು ನಾನು ಅವಕಾಶ ನೀಡುವುದಿಲ್ಲ ಎಂದು ಆ ದೇಶದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶನಿವಾರ ಹೇಳಿದ್ದಾರೆ.

ಉಭಯ ದೇಶಗಳ ಸೇನೆಗಳ ನಡುವಿನ ಸಂಬಂಧವನ್ನು ವೃದ್ಧಿಸುವುದಕ್ಕಾಗಿ ಉಭಯ ದೇಶಗಳು ಮಾತುಕತೆ ನಡೆಸುತ್ತಿರುವ ಸ್ಟೇಟಸ್ ಆಫ್ ಫೋರ್ಸಸ್ ಅಗ್ರೀಮೆಂಟ್ (ಎಸ್‌ಒಎಫ್‌ಎ) ಕರಡು ಒಪ್ಪಂದವನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂೆ ನಡುವೆ ಶೀತಲ ಸಮರ ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News