ಎನ್‌ ಬಿಎಫ್‌ ಸಿ ಬಿಕ್ಕಟ್ಟು ಪರಿಹಾರದೆಡೆಗೆ ನಿರ್ಮಲಾ ಭರವಸೆ

Update: 2019-07-06 18:00 GMT

  ಹೊಸದಿಲ್ಲಿ,ಜು.6: ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಕುರಿತಾದ ಬಿಕ್ಕಟ್ಟು ಶೀಘ್ರವೇ ಪರಿಹಾರಗೊಳ್ಳಲಿದೆಯೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಭರವಸೆ ವ್ಯಕ್ತಪಡಿಸಿದ್ದಾರೆ.

 ಬ್ಯಾಂಕೇತರ ಹಣಕಾಸು ವಲಯವು ಸಂಕಷ್ಟದಿಂದ ಹೊರಬರುವುದನ್ನು ಖಾತರಿಪಡಿಸಲು ಆರ್‌ ಬಿಐ ನಿಕಟವಾಗಿ ಪರಿಸ್ಥಿತಿಯ ಮೇಲೆ ನಿಗಾವಿರಿಸಿರುವುದಾಗಿ ಅವರು ತಿಳಿಸಿದರು. ಕಳೆದ ವರ್ಷ ಐಎಲ್‌ಆ್ಯಂಡ್‌ಎಫ್‌ಎಸ್ ಸಂಸ್ಥೆಯ ಪತನದ ಬಳಿಕ ಹಣಕಾಸಿನ ಮುಗ್ಗಟ್ಟನ್ನು ಬ್ಯಾಂಕೇತರ ಹಣಕಾಸು ಕಂಪೆನಿಗಳು ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೀತಾರಾಮನ್ ತನ್ನ ಬಜೆಟ್‌ ನಲ್ಲಿ ಹಲವಾರು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ.

 ‘‘ಎನ್‌ ಬಿಎಫ್‌ ಸಿ ಬಿಕ್ಕಟ್ಟು ಎದುರಿಸುತ್ತಿರುವ ಸವಾಲುಗಳು ಬಹುತೇಕವಾಗಿ ಪರಾಕಾಷ್ಠೆಗೆ ತಲುಪಿವೆ. ಪ್ರಾಯಶಃ ಈ ಸಮಸ್ಯೆಯು ಇನ್ನೂ ಮುಕ್ತಾಯವಾಗಿಲ್ಲ. ಆದರೆ ಅದು ಇನ್ನಷ್ಟು ಹದಗೆಡುವ ಬದಲಿಗೆ ಸ್ಥಿರಗೊಳ್ಳತೊಡಗಿದೆ. ಕಟ್ಟುನಿಟ್ಟಾಗಿ ಹೇಳುವುದಾದರೆ ಎನ್‌ಬಿಎಫ್‌ಸಿ ಸಮಸ್ಯೆಗಳು ಈಗ ಸ್ಪಂದಿಸಲ್ಪಟ್ಟಿದೆ’’ ಎಂದರು.

 ಎನ್‌ಬಿಎಫ್‌ಸಿ ವಲಯವನ್ನು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರಕಾರವು ಆರ್ಥಿಕವಾಗಿ ಸಶಕ್ತವಾಗಿರುವ ಎನ್‌ಬಿಎಫ್‌ಸಿಗಳ ಒಟ್ಟು ಒಂದು ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಸಾರ್ವಜನಿಕ ರಂಗದ ಬ್ಯಾಂಕ್‌ ಗಳು ಖರೀದಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಪ್ರಸ್ತಾವಿಸಿತ್ತು.

ಸಾರ್ವಜನಿಕ ಶೇರುಗಳನ್ನು ಬಿಡುಗಡೆಗೊಳಿಸುವ ಮೂಲಕ ಎನ್‌ಬಿಎಫ್‌ಸಿಗಳು ತಮ್ಮ ನಿಧಿಗಳನ್ನು ಹೆಚ್ಚಳಗೊಳಿಸುವುದಕ್ಕೆ ಅವಕಾಶ ಮಾಡಿಕೊಡಲಾಗುವುದೆಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News