ವಿದೇಶಿ ಪುಸ್ತಕಗಳಿಗೆ ಶೇ.5 ಸುಂಕ ಹೇರಿಕೆಯಿಂದ ದೇಶದ ಪುಸ್ತಕ ಉದ್ಯಮಕ್ಕೆ ಪ್ರಯೋಜನವಾಗದು

Update: 2019-07-06 18:20 GMT

ಮುಂಬೈ,ಜು.6: ಸ್ವದೇಶಿ ಪ್ರಕಟಣೆ ಹಾಗೂ ಮುದ್ರಣ ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಮದು ಪುಸ್ತಕಗಳಿಗೆ ಕೇಂದ್ರ ಬಜೆಟ್‌ನಲ್ಲಿ ಶೇ.5ರಷ್ಟು ಅಧಿಕ ಸುಂಕ ವಿಧಿಸಿರುವುದು ಪ್ರಕಾಶನ ಹಾಗೂ ಮಾರಾಟ ಉದ್ಯಮಕ್ಕೆ ಹೆಚ್ಚಿನ ಪ್ರಯೋಜನ ತಂದುಕೊಡಲು ವಿಫಲವಾಗಲಿದೆಯೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಭಾರತದಲ್ಲಿ ಆಮದು ಪುಸ್ತಕ ಕ್ಷೇತ್ರವು ಅತ್ಯಂತ ಚಿಕ್ಕದು. ಅವುಗಳಿಗೆ ಅಬಕಾರಿ ಸುಂಕವನ್ನು ಹೇರುವುದರಿಂದ ದೇಶದ ಬೊಕ್ಕಸಕ್ಕೆ ದೊಡ್ಡ ಲಾಭವುಂಟಾಗುವುದೆಂದು ನಾನು ಭಾವಿಸಲಾರೆ ಎಂದು ಎಫ್‌ಐಸಿಸಿಐ ಪ್ರಕಾಶನ ಸಮಿತಿಯ ವರಿಷ್ಠ ಹಾಗೂ ಕೇಂಬ್ರಿಜ್ ವಿವಿ ಮದ್ರುಣ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಜಾ ಹೇಳುತ್ತಾರೆ.

ವಿದೇಶಿ ಮೂಲದ ಪ್ರಕಾಶನ ಸಂಸ್ಥೆಗಳಾದ ಪೆಂಗ್ವಿನ್ ರ್ಯಾಂಡಮ್ ಹೌಸ್, ಪ್ಯಾನ್ ಮ್ಯಾಕ್‌ಮಿಲನ್ ಹಾಗೂ ಹಾರ್ಪರ್ ಕಾಲಿನ್ಸ್ ಭಾರತದಲ್ಲಿ ತಮ್ಮದೇ ಆದ ಮುದ್ರಣಾಲಯಗಳನ್ನು ಹೊಂದಿವೆ. ಹೀಗಾಗಿ ಆಮದು ಮಾಡಲಾಗುತ್ತಿರುವ ಪುಸ್ತಕಗಳ ಪ್ರಮಾಣವು ತೀರಾ ಸೀಮಿತವಾಗಿದೆ. ವಿದೇಶಿ ಪುಸ್ತಕಗಳ ಆಮದಿಗೆ ಅಧಿಕ ಸುಂಕ ಹೇರುವ ಕ್ರಮವು ಜ್ಞಾನ ಗಳಿಕೆಯ ಮೇಲೆ ಪರಿಣಾಮ ಬೀರಲಿದೆಯೆಂದು, ಹ್ಯಾಶೆಟ್ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕ ಥಾಮಸ್ ಅಬ್ರಹಾಂ ಹೇಳುತ್ತಾರೆ.

ವಿದೇಶಿ ಸುಂಕಗಳಿಗೆ ಅಬಕಾರಿ ಸುಂಕ ಹೇರಿಕೆಯು ಹೆಚ್ಚು ಜನರು ಓದುವಂತೆ ಮಾಡುವ ಉದ್ದೇಶವನ್ನು ವಿಫಲಗೊಳಿಸಲಿದೆ. ಯುರೋಪ್ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಹಾಗೆ ಸಣ್ಣ ಪುಟ್ಟ ಸ್ವದೇಶಿ ಪ್ರಕಾಶಕರಿಗೆ ಸಬ್ಸಿಡಿಗಳನ್ನು ಒದಗಿಸುವ ಮೂಲಕ ಹೆಚ್ಚು ಪುಸ್ತಕ ವಲಯದಲ್ಲಿ ಎಲ್ಲರನ್ನೂ ಒಪಡಿಸಿದ ಹಾಗೂ ಆರೋಗ್ಯಕರವಾದ ಅವಕಾಶವನ್ನು ಸೃಷ್ಟಿಸಬಹುದಾಗಿದೆಯೆಂದು ದಿಲ್ಲಿ ಮೂಲದ ಪುಸ್ತಕ ಮಳಿಗೆ ಫುಲ್ ಸರ್ಕಲ್‌ನ ಸಿಇಓ ಪ್ರಿಯಾಂಕಾ ಮಲ್ಹೋತ್ರಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News