ಮಹಿಳೆಯರಿಗೆ ಮಸೀದಿ ಪ್ರವೇಶ ಕುರಿತ ಹಿಂದೂ ಮಹಾಸಭಾ ಅಪೀಲನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2019-07-08 10:11 GMT

ಹೊಸದಿಲ್ಲಿ, ಜು.8: ಮುಸ್ಲಿಂ ಮಹಿಳೆಯರಿಗೆ ಮಸೀದಿಗಳನ್ನು ಪ್ರವೇಶಿಸಲು ಅನುಮತಿಸುವ ಹಾಗೂ ಬುರ್ಖಾ ನಿಷೇಧಿಸುವ ಆದೇಶ ಹೊರಡಿಸುವಂತೆ ಕೋರಿ ಅಖಿಲ ಭಾರತ ಹಿಂದೂ ಮಹಾಸಭಾ ಸಲ್ಲಿಸಿರುವ ಅಪೀಲನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

“ಮುಸ್ಲಿಂ ಮಹಿಳೆಯೊಬ್ಬರು ಈ ಪದ್ಧತಿಯನ್ನು ಪ್ರಶ್ನಿಸಲಿ'' ಎಂದು ತಮ್ಮ ಆದೇಶ ನೀಡುವ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ಹಿಂದೂ ಮಹಾಸಭಾದ ಕೇರಳ ಘಟಕದ ಅಧ್ಯಕ್ಷರ ಮೇಲಿನ ಅಪೀಲನ್ನು ಕೇರಳ ಹೈಕೋರ್ಟ್ ಅಕ್ಟೋಬರ್ 2018ರಲ್ಲಿ ತಿರಸ್ಕರಿಸಿದ ನಂತರ ಅವರು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಅಪೀಲನ್ನು ತಿರಸ್ಕರಿಸುವ ವೇಳೆ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿತ್ತು.

ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಳಕ್ಕೆ ಪ್ರವೇಶಾವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ಹಿಂದೂ ಮಹಾಸಭಾ ನಾಯಕ ತಮ್ಮ ಅಪೀಲನ್ನು ಕೇರಳ ಹೈಕೋರ್ಟ್ ಮುಂದಿರಿಸಿದ್ದರು. ಆದರೆ ಇದು ಕೇವಲ ಪ್ರಚಾರ ತಂತ್ರ ಎಂದು ಕೇರಳ ಹೈಕೋರ್ಟ್ ಈ ಅಪೀಲು  ತಿರಸ್ಕರಿಸುವ ಮೇಲೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News