ಬ್ರೆಝಿಲ್ ಮುಡಿಗೆ ಕೋಪಾ ಅಮೆರಿಕ ಟ್ರೋಫಿ

Update: 2019-07-09 03:28 GMT

ರಿಯೋ ಡಿ ಜನೈರೊ, ಜು.8: ಗ್ಯಾಬ್ರಿಯಲ್ ಜೀಸಸ್ ಕೆಂಪು ಕಾರ್ಡ್ ಪಡೆದು ಮೈದಾನದಿಂದ ನಿರ್ಗಮಿಸಿದರೂ 10 ಆಟಗಾರರೊಂದಿಗೆ ಹೋರಾಟ ಮುಂದುವರಿಸಿದ ಆತಿಥೇಯ ಬ್ರೆಝಿಲ್ ಫುಟ್ಬಾಲ್ ತಂಡ ಪೆರು ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿ ಪ್ರತಿಷ್ಠಿತ ಕೋಪಾ ಅಮೆರಿಕ ಟ್ರೋಫಿಯನ್ನು ಬಗಲಿಗೇರಿಸಿಕೊಂಡಿತು.

ಮರಕಾನ ಸ್ಟೇಡಿಯಂನಲ್ಲಿ ದಕ್ಷಿಣ ಅಮೆರಿಕದ ದೈತ್ಯ ತಂಡ ಬ್ರೆಝಿಲ್ 9ನೇ ಬಾರಿ ಕೋಪಾ ಅಮೆರಿಕ ಟ್ರೋಫಿ ಜಯಿಸಿದೆ. 2007ರ ಬಳಿಕ ಮೊದಲ ಬಾರಿ ಈ ಸಾಧನೆ ಮಾಡಿತು. ಆತಿಥೇಯರು 15ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿದರು. ಇಬ್ಬರು ಡಿಫೆಂಡರ್‌ಗಳನ್ನು ವಂಚಿಸಿದ ಗ್ಯಾಬ್ರಿಯಲ್ ಜೀಸಸ್, ಎವರ್ಟನ್ ಸೊರೆಸ್‌ಗೆ ಪಾಸ್ ನೀಡಿದರು. ಸೊರೆಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಪೆರು ತಂಡ ಮೊದಲಾರ್ಧ ಕೊನೆಗೊಳ್ಳಲು ಒಂದು ನಿಮಿಷ ಬಾಕಿ ಇರುವಾಗ(44ನೇ ನಿಮಿಷ)ಗೋಲುಗಳಿಸಿ 1-1 ರಿಂದ ಸಮಬಲ ಸಾಧಿಸಿತು. ಥಿಯಾಗೊ ಸಿಲ್ವಾ ಕೈಯ್ಯಲ್ಲಿ ಚೆಂಡನ್ನು ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಸ್ಪಾಟ್ ಅವಕಾಶ ಪಡೆದ ಪಾಲೊ ಗುರೆರೊ ಪೆರು ಪರ ಏಕೈಕ ಗೋಲು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News