ನೂತನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಮಿತಿ ರಚಿಸುವಂತೆ ಜನಾರ್ಧನ ದ್ವಿವೇದಿ ಸಲಹೆ

Update: 2019-07-09 18:54 GMT

ಹೊಸದಿಲ್ಲಿ,ಜು.9: ನೂತನ ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಸೂಚಿಸಲು ಸಮಿತಿಯೊಂದನ್ನು ರಾಹುಲ್ ಗಾಂಧಿಯವರು ರಚಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕಹಾಗೂ ಮಾಜಿ ಎಐಸಿಸಿ ಕಾರ್ಯದರ್ಶಿ(ಸಂಘಟನೆ) ಜನಾರ್ಧನ ದ್ವಿವೇದಿ ಅವರು ಮಂಗಳವಾರ ಇಲ್ಲಿ ಸಲಹೆ ನೀಡಿದರು.

ನೂತನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಅನೌಪಚಾರಿಕವಾಗಿ ಚರ್ಚಿಸುತ್ತಿರುವ ಸಮಿತಿಯನ್ನು ವಿಧ್ಯುಕ್ತವಾಗಿ ರಚಿಸಿದರೆ ಅದರ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದ ಅವರು,ರಾಹುಲ್ ಸಮಿತಿಯನ್ನು ರಚಿಸಿದ ಬಳಿಕ ಅದು ತನ್ನ ಅಂತಿಮ ನಿರ್ಧಾರಕ್ಕೆ ಮುನ್ನ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಚರ್ಚಿಸಬೇಕು ಎಂದರು.

ರಾಹುಲ್ ತಾಂತ್ರಿಕವಾಗಿ ಈಗಲೂ ಪಕ್ಷದ ಮುಖ್ಯಸ್ಥರಾಗಿದ್ದಾರೆ ಎಂದ ದ್ವಿವೇದಿ,ಲೋಕಸಭಾ ಚುನಾವಣೆಗಳ ಫಲಿತಾಂಶದ ಬಳಿಕ ಅಧ್ಯಕ್ಷ ಹುದ್ದೆಗೆ ರಾಜೀನಾಮೆಸಲ್ಲಿಸಿದ್ದಕ್ಕಾಗಿ ಅವರನ್ನು ಪ್ರಶಂಸಿಸಿದರು. ಇದು ಇತರ ಕಾಂಗ್ರೆಸ್ ನಾಯಕರು ಅನುಸರಿಸಲು ಮಾದರಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News