ದಿಲ್ಲಿಯ ಕನಾಟ್‌ಪ್ಲೇಸ್ ವಿಶ್ವದ 9ನೇ ಅತ್ಯಂತ ದುಬಾರಿ ಕಚೇರಿ ಪ್ರದೇಶ

Update: 2019-07-10 17:58 GMT

ಹೊಸದಿಲ್ಲಿ, ಜು.10: ರಾಷ್ಟ್ರೀಯ ರಾಜಧಾನಿ ದಿಲ್ಲಿಯ ಕನಾಟ್‌ಪ್ಲೇಸ್ ಪ್ರದೇಶ ವಿಶ್ವದ 9ನೇ ಅತ್ಯಂತ ದುಬಾರಿ ಕಚೇರಿ ಪ್ರದೇಶವಾಗಿದೆ ಎಂದು ಸಿಬಿಆರ್ ವರದಿಯಲ್ಲಿ ತಿಳಿಸಲಾಗಿದೆ.

 ಕನಾಟ್‌ಪ್ಲೇಸ್ ಪ್ರದೇಶದಲ್ಲಿ ಕಚೇರಿಯೊಂದಕ್ಕೆ ಚದರಡಿಗೆ 9,800 ರೂ. ದರವಿದೆ. ಹಾಂಕಾಂಗ್ (ಕೇಂದ್ರ)ವು ಸತತ ಎರಡನೇ ಬಾರಿಗೆ ವಿಶ್ವದ ದುಬಾರಿ ಕಚೇರಿ ಪ್ರದೇಶವೆನಿಸಿಕೊಂಡಿದ್ದು ಇಲ್ಲಿ ಚದರಡಿಗೆ 322 ಡಾಲರ್ ದರವಿದೆ. ಲಂಡನ್(ವೆಸ್ಟ್‌ಎಂಡ್)ನಲ್ಲಿ ಚದರಡಿಗೆ 222.7 ಡಾಲರ್ ದರವಿದ್ದು ಎರಡನೇ ಸ್ಥಾನದಲ್ಲಿದೆ. ಹಾಂಕಾಂಗ್‌ನ ಕೊವ್ಲೆನ್ ಪ್ರದೇಶ ಚದರಡಿಗೆ 208.67 ಡಾಲರ್ ದರದೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಯಾರ್ಕ್‌ನ ಮಿಡ್‌ಟೌನ್ ಮ್ಯಾನ್‌ಹಟನ್ ನಾಲ್ಕನೇ, ಬೀಜಿಂಗ್‌ನ ಫೈನಾನ್ಸ್ ಸ್ಟ್ರೀಟ್ ಐದನೇ ಸ್ಥಾನದಲ್ಲಿದೆ. ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ನಾರಿಮನ್ ಪಾಯಿಂಟ್ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಕ್ರಮವಾಗಿ 27ನೇ ಮತ್ತು 40ನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News