ಚೀನಾದಲ್ಲಿ ದಾಖಲೆಯ ಮಳೆ: 80,000 ಮಂದಿ ಸ್ಥಳಾಂತರ

Update: 2019-07-11 18:01 GMT

ಬೀಜಿಂಗ್, ಜು. 11: ದಕ್ಷಿಣ ಮತ್ತು ಪೂರ್ವ ಚೀನಾದಲ್ಲಿ ಅರ್ಧ ಶತಮಾನಕ್ಕೂ ಅಧಿಕ ಅವಧಿಯಲ್ಲೇ ಸುರಿದ ಭಾರೀ ಮಳೆಯು ತೀವ್ರ ಹಾನಿಯುಂಟು ಮಾಡಿದೆ. ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದ್ದು, ಮನೆಗಳು ಮತ್ತು ಬೆಳೆಗಳಿಗೆ ಹಾನಿಯುಂಟು ಮಾಡಿದೆ ಹಾಗೂ ಸುಮಾರು 80,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರದೇಶಗಳಲ್ಲಿ ಈ ವಾರ ಸುರಿದ ಮಳೆಯು ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ಸುರಿದ ಮಳೆಗಿಂತ 51 ಶೇಕಡದಷ್ಟು ಹೆಚ್ಚಾಗಿದೆ.

ಬೀಜಿಂಗ್-ಗ್ವಾಂಗ್‌ಝೂ ರೈಲು ಹಳಿಯಲ್ಲಿ ರೈಲುಗಳು ತಡವಾಗಿ ಚಲಿಸಿದವು.

ಮಳೆಯಿಂದಾಗಿ 2.69 ಬಿಲಿಯ ಯುವಾನ್ (ಸುಮಾರು 2,700 ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ, 3,11,600 ಎಕರೆ ಪ್ರದೇಶದ ಕೃಷಿಗೆ ಹಾನಿಯಾಗಿದೆ ಹಾಗೂ 1,600ಕ್ಕೂ ಅಧಿಕ ಮನೆಗಳು ಕುಸಿದಿವೆ ಎಂದು ತುರ್ತು ನಿರ್ವಹಣೆ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News