ಗ್ರೀನ್ ಕಾರ್ಡ್ ಮಿತಿ ತೆಗೆಯುವ ಮಸೂದೆ ಅಂಗೀಕಾರ

Update: 2019-07-11 18:10 GMT

ವಾಶಿಂಗ್ಟನ್, ಜು. 11: ಗ್ರೀನ್ ಕಾರ್ಡ್ ವಿತರಣೆಯಲ್ಲಿ ಈಗ ಅನುಸರಿಸಲಾಗುತ್ತಿರುವ ಒಂದು ದೇಶಕ್ಕೆ ಗರಿಷ್ಠ 7 ಶೇಕಡ ಮಿತಿಯನ್ನು ರದ್ದುಪಡಿಸುವ ಮಸೂದೆಯನ್ನು ಅಮೆರಿಕದ ಸಂಸದರು ಅಂಗೀಕರಿಸಿದ್ದಾರೆ.

ಇದರಿಂದ ಅತ್ಯಂತ ಕೌಶಲಭರಿತ ಸಾವಿರಾರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಅನುಕೂಲವಾಗಿದೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಈ ಮಸೂದೆಯನ್ನು ಅಂಗೀಕರಿಸಿದೆ. ಇದು ಕಾನೂನು ಆದ ಬಳಿಕ, ಭಾರತ ಮುಂತಾದ ದೇಶಗಳ ಪ್ರತಿಭಾವಂತ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಗ್ರೀನ್ ಕಾರ್ಡ್‌ಗಾಗಿ ನಿರಂತರವಾಗಿ ಕಾಯುವುದನ್ನು ಕೊನೆಗೊಳಿಸುತ್ತದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News