ಕರ್ತಾರ್‌ಪುರ ಕಾರಿಡಾರ್ ಶೂನ್ಯರೇಖೆಯಲ್ಲಿ ಸೇತುವೆ ನಿರ್ಮಿಸಲು ಪಾಕ್ ತಾತ್ವಿಕ ಒಪ್ಪಿಗೆ: ಭಾರತ

Update: 2019-07-14 18:47 GMT

ಹೊಸದಿಲ್ಲಿ, ಜು.14: ಕರ್ತಾರ್‌ಪುರ ಕಾರಿಡಾರ್‌ಗೆ ಸರ್ವಋತು ಸಂಪರ್ಕ ಸಾಧ್ಯವಾಗಿಸಲು ಭಾರತ-ಪಾಕ್ ರಾಷ್ಟ್ರಗಳ ಗಡಿಯ ಶೂನ್ಯರೇಖೆಯಲ್ಲಿ ಸೇತುವೆ ನಿರ್ಮಿಸುವ ಪ್ರಸ್ತಾಪಕ್ಕೆ ಪಾಕಿಸ್ತಾನ ತಾತ್ವಿಕ ಒಪ್ಪಿಗೆ ನೀಡಿದೆ .

ಕಾರಿಡಾರ್‌ಗೆ ಯಾವುದೇ ಧರ್ಮದ ಯಾತ್ರಾರ್ಥಿಗಳೂ ಭೇಟಿ ನೀಡಬಹುದು ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಈ ಮಧ್ಯೆ ಕರ್ತಾರ್‌ಪುರ ಕಾರಿಡಾರ್‌ಗೆ ಸರ್ವಋತು ಸಂಪರ್ಕ ಸಾಧ್ಯವಾಗಿಸಲು ಭಾರತ-ಪಾಕ್ ರಾಷ್ಟ್ರಗಳ ಗಡಿಯ ಶೂನ್ಯರೇಖೆಯಲ್ಲಿ ಸೇತುವೆ ನಿರ್ಮಿಸುವ ಪ್ರಸ್ತಾವನೆಗೆ ಪಾಕಿಸ್ತಾನ ತಾತ್ವಿಕ ಒಪ್ಪಿಗೆ ನೀಡಿದೆ . ಕಾರಿಡಾರ್‌ಗೆ ಯಾವುದೇ ಧರ್ಮದ ಯಾತ್ರಾರ್ಥಿಗಳೂ ಭೇಟಿ ನೀಡಬಹುದು ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಸಿಖ್ ಯಾತ್ರಾರ್ಥಿಗಳಿಗೆ ಕಾರಿಡಾರ್ ತಲುಪಲು ಸೇತುವೆಯ ಬದಲು ಒಡ್ಡಿನ ಮೇಲಿನ ದಾರಿ ಸೂಕ್ತ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದರು. ಆದರೆ ಇದರಿಂದ ಭಾರತದತ್ತ ಇನ್ನಷ್ಟು ನೆರೆನೀರು ನುಗ್ಗುತ್ತದೆ ಎಂದು ಭಾರತ ಆತಂಕ ವ್ಯಕ್ತಪಡಿಸಿ ಆಕ್ಷೇಪಿಸಿತ್ತು.

ಪಾಕಿಸ್ತಾನದ ನಿಯೋಗದಲ್ಲಿ ಖಾಲಿಸ್ತಾನ್‌ವಾದಿ ಮುಖಂಡ ಗೋಪಾಲ್‌ಸಿಂಗ್ ಚಾವ್ಲಾರನ್ನು ಸೇರಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ಸೂಚಿಸಿದ ಬಳಿಕ ಅವರನ್ನು ನಿಯೋಗದಿಂದ ಕೈಬಿಡಲಾಗಿದೆ. ಕರ್ತಾರ್‌ಪುರ ಕಾರಿಡಾರ್ ಕುರಿತ ಪ್ರಥಮ ಹಂತದ ಮಾತುಕತೆ ಮಾರ್ಚ್ 14ರಂದು ನಡೆದಿದ್ದರೆ ಎಪ್ರಿಲ್ 2ರಂದು ನಿಗದಿಯಾಗಿದ್ದ ದ್ವಿತೀಯ ಹಂತದ ಮಾತುಕತೆಯನ್ನು ಭದ್ರತೆಯ ಕಾರಣದಿಂದ ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News