ಕಿವೀಸ್ ಸೊನ್ನೆ ರನ್‌ನಿಂದ ಸೋಲುಂಡಿತು: ನ್ಯೂಝಿಲ್ಯಾಂಡ್ ಹೆರಾಲ್ಡ್ ವಿಷಾದ

Update: 2019-07-15 18:39 GMT

ಕ್ರೈಸ್ಟ್‌ಚರ್ಚ್, ಜು.16: ನ್ಯೂಝಿಲ್ಯಾಂಡ್ ತಂಡ ವಿಶ್ವಕಪ್ ಫೈನಲ್‌ನಲ್ಲಿ ಬೌಂಡರಿ ಲೆಕ್ಕಾಚಾರದಲ್ಲಿ ಸೋತಿರುವುದಕ್ಕೆ ಅಲ್ಲಿನ ಪತ್ರಿಕೆಗಳು ವಿಷಾದ ವ್ಯಕ್ತಪಡಿಸಿವೆ. ‘‘ವಿಶ್ವಕಪ್ ಕೊನೆಗೊಂಡಿದೆ! ಬ್ಲಾಕ್‌ಕ್ಯಾಪ್ಸ್‌ಗೆ ಝೀರೊ ರನ್ ಸೋಲು’’ಎಂದು ‘ನ್ಯೂಝಿಲ್ಯಾಂಡ್ ಹೆರಾಲ್ಡ್’ ನ್ಯೂಸ್ ಪೇಪರ್ ಮುಖಪುಟದಲ್ಲಿ ಪ್ರಕಟಿಸಿದೆ.‘‘ಇದೊಂದು ಕ್ರೂರ. ಇದೊಂದು ನಂಬಲಾಗದ ಪಂದ್ಯ. ಎಲ್ಲರೂ ವೀಕ್ಷಿಸಿದ ಶ್ರೇಷ್ಠ ಕ್ರೀಡಾ ಹಣಾಹಣಿ. ಫಲಿತಾಂಶ ನ್ಯೂಝಿಲ್ಯಾಂಡ್‌ನ ಹೃದಯ ಚೂರು ಮಾಡಿದೆ’’ ಪತ್ರಿಕೆಯ ಕಾಲಂನಲ್ಲಿ ಬರೆಯಲಾಗಿದೆ.

ಸೋಮವಾರ ರಸ್ತೆಗಳೆಲ್ಲಾ ಖಾಲಿಯಾಗಿವೆ. ವಿಶ್ವಕಪ್ ಸೋಲಿಗೆ ಜನರ ಸಂತಾಪ ಇದಾಗಿದೆ ಎಂದು ಸ್ಥಳೀಯ ರೇಡಿಯೊ ಸ್ಟೇಶನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News