ಮಾಜಿ ಫುಟ್ಬಾಲ್ ಆಟಗಾರನ ಗುಂಡಿಟ್ಟು ಹತ್ಯೆ

Update: 2019-07-16 13:29 GMT

ಜೋಹಾನ್ಸ್‌ಬರ್ಗ್, ಜು.16: ದಕ್ಷಿಣ ಆಫ್ರಿಕದ ಮಾಜಿ ಫುಟ್ಬಾಲ್ ಆಟಗಾರ ಮಾರ್ಕ್ ಬ್ಯಾಟ್ಚೆಲರ್ ಸೋಮವಾರ ಸಂಜೆ ಜೋಹಾನ್ಸ್‌ಬರ್ಗ್‌ನ ತನ್ನ ಮನೆಯಿಂದ ಹೊರಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ.

‘‘ಬ್ಯಾಟ್ಚೆಲರ್ ತನ್ನ ಮನೆಯಿಂದ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು. ಅವರನ್ನು ಇಬ್ಬರು ದುಷ್ಕರ್ಮಿಗಳು ಮೋಟಾರ್‌ಸೈಕಲ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬ್ಯಾಟ್ಚೆಲರ್ ತನ್ನ ವಾಹನದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಘಟನೆಯು ಬ್ಯಾಟ್ಜೆಲರ್ ಮನೆಯ ಹೊರಗಡೆ ನಡೆದಿದೆ’’ ಎಂದು ಪೊಲೀಸ್ ವಕ್ತಾರ ಲುಂಗೆಲೊ ದ್ಲಾಮಿನಿ ಹೇಳಿದ್ದಾರೆ.

ದಾಳಿಯ ಹಿಂದಿನ ಉದ್ದೇಶ ಏನೆಂದು ಇನ್ನೂ ಗೊತ್ತಾಗಿಲ್ಲ. ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

49ರ ಹರೆಯದ ಬ್ಯಾಟ್ಚೆಲರ್ ದಕ್ಷಿಣ ಆಫ್ರಿಕದ ಒರ್ಲ್ಯಾಂಡೊ ಪೈರೇಟ್ಸ್ ಹಾಗೂ ಕೈಝರ್ ಚೀಫ್ಸ್, ಮಮೆಲೊಡಿ ಸುನ್‌ಡೌನ್ಸ್, ಮೊರೊಕಾ ಸ್ವಾಲ್ಲೊಸ್ ಹಾಗೂ ಸೂಪರ್‌ಸ್ಪೋರ್ಟ್ ಯುನೈಟೆಡ್ ಪರ ಆಡಿದ್ದರು. ಬ್ಯಾಟ್ಚೆಲರ್ ಪ್ಯಾರಾಲಿಂಪಿಕ್ಸ್‌ನ ಸ್ಟಾರ್ ಓಟಗಾರ ಆಸ್ಕರ್ ಪ್ರಿಟೋರಿಯಸ್‌ರೊಂದಿಗೆ ದೀರ್ಘ ಸಮಯದಿಂದ ದ್ವೇಷ ಹೊಂದಿದ್ದರು. ಪ್ರಿಟೋರಿಯಸ್ 2013ರಲ್ಲಿ ತನ್ನ ಪ್ರಿಯತಮೆ ರೀವಾ ಸ್ಟೀನ್‌ಕಾಂಪ್‌ರನ್ನು ಹತ್ಯೆಗೈದ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News