ವಿಜಯವೀರ್ ಸಿಧುಗೆ 3ನೇ ಚಿನ್ನ

Update: 2019-07-16 18:12 GMT

ಹೊಸದಿಲ್ಲಿ, ಜು.16: ಈಗ ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ವಿಜಯವೀರ್ ಸಿಧು ಮೂರನೇ ಚಿನ್ನದ ಪದಕ ಬಾಚಿಕೊಂಡರು. ರಾಜ್‌ಕನ್ವರ್ ಸಿಂಗ್ ಸಂಧು ಹಾಗೂ ಆದರ್ಶ್ ಸಿಂಗ್ ಜೊತೆಯಲ್ಲಿ ವಿಜಯವೀರ್ ಪುರುಷರ 25 ಮೀ. ಪಿಸ್ತೂಲ್ ಟೀಮ್ ಇವೆಂಟ್‌ನಲ್ಲಿ ಚಿನ್ನ ಜಯಿಸಿದರು.

ಆದರ್ಶ್‌ಗೆ ಇದು ಟೂರ್ನಿಯಲ್ಲಿ ಗೆದ್ದ ಎರಡನೇ ಪದಕವಾಗಿದೆ. ಭಾರತ ಮೂರನೇ ದಿನದ ಸ್ಪರ್ಧೆಯ ಅಂತ್ಯಕ್ಕೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ಏಳು ಚಿನ್ನ ಸಹಿತ ಒಟ್ಟು 16 ಪದಕಗಳನ್ನು ಜಯಿಸಿದೆ. ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಹೃದಯ್ ಹಝಾರಿಕಾ, ಯಶ್ ವರ್ಧನ್ ಹಾಗೂ ಪಾರ್ಥ್ ಮಖಿಜಾ ತಂಡ 1877.4 ಅಂಕ ಗಳಿಸಿ ಬೆಳ್ಳಿ ಪದಕವನ್ನು ಜಯಿಸಿದೆ. ಚಿನ್ನ ಜಯಿಸಿದ ಚೀನಾದ ತಂಡಕ್ಕಿಂತ ಕೇವಲ 0.4 ಅಂಕ ಹಿಂದೆ ಬಿದ್ದಿದೆ. ಜೂನಿಯರ್ ವಿಶ್ವ ಚಾಂಪಿಯನ್ ಹೃದಯ್ 10 ಮೀ. ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ನಿರಾಸೆಗೊಳಿಸಿದರು. 24 ಶಾಟ್‌ಗಳ ಫೈನಲ್‌ನಲ್ಲಿ 18ನೇ ಶಾಟ್ ತನಕ ಹೃದಯ್ ಲೀಡ್‌ನಲ್ಲಿದ್ದರು. ಆದರೆ, 19ನೇ ಶಾಟ್‌ನಲ್ಲಿ 9.6 ಅಂಕ ಗಳಿಸಿದ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದರು. ಅಂತಿಮವಾಗಿ ಒಟ್ಟು 207.3 ಅಂಕ ಗಳಿಸಿದರು. ರಶ್ಯದ ಗ್ರಿಗೊರಿ ಶಮಕೊವ್ 250.0 ಅಂಕ ಗಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News