ಪರಮಾಣು ಒಪ್ಪಂದದ ಬದ್ಧತೆಗಳಿಂದ ಹಿಂದಕ್ಕೆ ಇರಾನ್ ಪರಮೋಚ್ಛ ನಾಯಕ : ಖಾಮಿನೈ

Update: 2019-07-17 16:49 GMT

ಟೆಹರಾನ್, ಜು. 17: 2015ರಲ್ಲಿ ಜಾಗತಿಕ ಪ್ರಭಾವಿ ದೇಶಗಳೊಂದಿಗೆ ಮಾಡಿಕೊಂಡಿರುವ ಪರಮಾಣು ಒಪ್ಪಂದದ ಬದ್ಧತೆಗಳಿಂದ ಇರಾನ್ ಹಿಂದೆ ಸರಿಯುತ್ತಾ ಹೋಗುತ್ತದೆ ಎಂದು ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮಂಗಳವಾರ ಹೇಳಿದ್ದಾರೆ.

‘‘ನೀವು ನಿಮ್ಮ ಬದ್ಧತೆಗಳಲ್ಲಿ ಒಂದನ್ನೂ ನಿಭಾಯಿಸಲಿಲ್ಲ, ನಾವು ನಮ್ಮ ಬದ್ಧತೆಗಳನ್ನು ನಿಭಾಯಿಸಬೇಕೆಂದು ನೀವು ಯಾಕೆ ಬಯಸುವಿರಿ?’’ ಎಂಬುದಾಗಿ ಅವರು ಒಪ್ಪಂದದಲ್ಲಿ ಭಾಗಿಯಾಗಿರುವ ಯುರೋಪಿಯನ್ ದೇಶಗಳನ್ನು ಪ್ರಶ್ನಿಸಿದರು.

‘‘ಒಪ್ಪಂದದ ನಮ್ಮ ಬದ್ಧತೆಗಳನ್ನು ಕಡಿಮೆ ಮಾಡುವುದನ್ನು ನಾವೀಗ ಆರಂಭಿಸಿದ್ದೇವೆ. ಈ ಪ್ರಕ್ರಿಯೆ ಮುಂದುವರಿಯುತ್ತದೆ’’ ಎಂದು ಟೆಹರಾನ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News