2018ರ ಏಶ್ಯನ್ ಗೇಮ್ಸ್‌: ಬೆಳ್ಳಿ ಪಡೆದ ಭಾರತದ ರಿಲೇ ತಂಡಕ್ಕೆ ಸ್ವರ್ಣ ಪದಕದ ಭಡ್ತಿ ಸಾಧ್ಯತೆ !

Update: 2019-07-20 14:24 GMT

ಹೊಸದಿಲ್ಲಿ, ಜು.20: ಕಳೆದ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪಡೆದಿದ್ದ ಭಾರತದ 4x400 ಮಿಕ್ಸೆಡ್ ರಿಲೇ ತಂಡಕ್ಕೆ ಚಿನ್ನ ಸಿಗುವುದು ಖಚಿತವಾಗಿದೆ.

ಕೂಟದಲ್ಲಿ ಚಿನ್ನ ಪಡೆದಿದ್ದ ಬಹರೈನ್ ತಂಡ ಡೋಪ್ ಟೆಸ್ಟ್‌ನಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಅಗ್ರಸ್ಥಾನದೊಂದಿಗೆ ಸ್ವರ್ಣ ಪದಕದ ಭಡ್ತಿ ಸಿಗುವ ಸಾಧ್ಯತೆ ಇದೆ. ಜಕಾರ್ತಾದಲ್ಲಿ ಕಳೆದ ವರ್ಷ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಮುಹಮ್ಮದ್ ಅನಸ್, ಹಿಮಾ ದಾಸ್, ಎಂ.ಆರ್.ಪೂವಮ್ಮ ಮತ್ತು ಅರೋಕಿಯ ರಾಜೀವ್ ಅವರನ್ನೊಳಗೊಂಡ ಮಿಕ್ಸೆಡ್ ತಂಡ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪಡೆದಿತ್ತು.

   ಕೆಮಿ ಅಡೆಕೊಯಾ ನೇತೃತ್ವದ ಬಹರೈನ್‌ನ ರಿಲೇ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿತ್ತು. ಉದ್ದೀಪನಾ ಔಷಧ ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೆಮಿ ಅಡೆಕೊಯಾರಿಗೆ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯೂನಿಟ್(ಎಐಯು) ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ಏಶ್ಯನ್ ಗೇಮ್ಸ್‌ನ 400 ಮೀಟರ್ ಹರ್ಡಲ್ಸ್‌ನಲ್ಲಿ ಅಡೆಕೊಯಾ ಚಿನ್ನ ಪಡೆದಿದ್ದರು. ಭಾರತದ ಅನು ರಾಘುವನ್ ನಾಲ್ಕನೇ ಸ್ಥಾನ ಪಡೆದಿದ್ದರು. ಡೋಪ್ ಟೆಸ್ಟ್‌ನಲ್ಲಿ ಇದೀಗ ಅಡೆಕೊಯಾ ಚಿನ್ನ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಅನು ರಾಘವನ್‌ಗೆ ಮೂರನೇ ಸ್ಥಾನದೊಂದಿಗೆ ಕಂಚು ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News