ಹಡಗು ವಶ ಕಾನೂನುಬದ್ಧ: ಇರಾನ್

Update: 2019-07-22 17:13 GMT

ಟೆಹರಾನ್, ಜು. 22: ಬ್ರಿಟಿಶ್ ಧ್ವಜ ಹೊಂದಿದ ತೈಲ ಟ್ಯಾಂಕರೊಂದನ್ನು ಹೋರ್ಮುಝ್ ಜಲಸಂಧಿಯಲ್ಲಿ ಇರಾನ್ ವಶಕ್ಕೆ ತೆಗೆದುಕೊಂಡಿರುವುದು ಕಾನೂನುಬದ್ಧ ಕ್ರಮವಾಗಿದೆ ಎಂದು ಇರಾನ್ ಸರಕಾರದ ವಕ್ತಾರರೊಬ್ಬರು ಸೋಮವಾರ ಹೇಳಿದ್ದಾರೆ.

‘‘ಬ್ರಿಟಿಶ್ ಟ್ಯಾಂಕರನ್ನು ವಶಪಡಿಸಿಕೊಂಡಿರುವುದು ಇರಾನ್ ತೆಗೆದುಕೊಂಡ ಕಾನೂನುಬದ್ಧ ಕ್ರಮವಾಗಿದೆ. ವಲಯದ ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ ಇರಾನ್ ಆ ಹಡಗನ್ನು ನಿಲ್ಲಿಸಿದೆ’’ ಎಂದು ಟೆಹರಾನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ ರಬೀಐ ಹೇಳಿದರು.

ತೈಲ ಒಯ್ಯುತ್ತಿದ್ದ ಸ್ಟೆನ ಇಂಪೇರೊ ಎಂಬ ಹೆಸರಿನ ಟ್ಯಾಂಕರನ್ನು ಇರಾನ್ ಶುಕ್ರವಾರ ವಶಪಡಿಸಿಕೊಂಡಿತ್ತು. ಮೀನುಗಾರಿಕಾ ದೋಣಿಯೊಂದಕ್ಕೆ ಅದು ಢಿಕ್ಕಿಯಾದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಬೇಕಾಯಿತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News