ಬ್ರಿಟನ್: ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್

Update: 2019-07-23 11:57 GMT

ಲಂಡನ್ : ಬ್ರಿಟನ್ ದೇಶದ ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಅವರು ಆಯ್ಕೆಯಾಗಿದ್ದು, ಮುಂದಿನ ಪ್ರಧಾನಿಯಾಗಿ ಅವರು ಈಗಿನ ಪ್ರಧಾನಿ ತೆರೆಸಾ ಮೇ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಲಂಡನ್ ನಗರದ ಮಾಜಿ ಮೇಯರ್ ಆಗಿರುವ ಬೋರಿಸ್ ಜಾನ್ಸನ್ ಅವರು ಪಕ್ಷದ ಚುನಾವಣೆಯಲ್ಲಿ 92,153 ಮತಗಳನ್ನು ಪಡೆದಿದ್ದರೆ ಅವರ ಎದುರಾಳಿ, ವಿದೇಶ ಸಚಿವ ಜೆರೆಮಿ ಹಂಟ್ 46,656 ಮತಗಳನ್ನು ಗಳಿಸಿದ್ದಾರೆ.

ಕಳೆದ ವರ್ಷ ತಾವು ಸಹಿ ಹಾಕಿದ ಬ್ರೆಕ್ಸಿಟ್ ಒಪ್ಪಂದ ಸತತವಾಗಿ ತಿರಸ್ಕೃತಗೊಂಡ ನಂತರ ತಾವು ರಾಜೀನಾಮೆ ನೀಡುವುದಾಗಿ ತೆರೆಸಾ ಮೇ ಈ ಹಿಂದೆ ಘೋಷಿಸಿದ ಕಾರಣ ಈ ಹುದ್ದೆಗಾಗಿ ಪಕ್ಷದಲ್ಲಿ ಚುನಾವಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News