ಗುವಾಹಟಿಯಲ್ಲಿ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ ?

Update: 2019-07-23 17:33 GMT

ಗುವಾಹಟಿ, ಜು.23: ಅಸ್ಸಾಂನಲ್ಲಿ ಫುಟ್ಬಾಲ್‌ಗೆ ಇರುವ ಜನಪ್ರಿಯತೆಯನ್ನು ಮನಗಂಡು ಅಸ್ಸಾಂ ಫುಟ್ಬಾಲ್ ಅಸೋಸಿಯೇಶನ್ 2022ರ ಫಿಫಾ ವಿಶ್ವಕಪ್‌ನ ಅರ್ಹತಾ ಸುತ್ತಿನ ಆರಂಭಿಕ ಪಂದ್ಯ ಆಯೋಜಿಸಲು ಆಸಕ್ತಿ ವಹಿಸಿದೆ. ಭಾರತ ಸೆ.5ರಂದು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಲಿದೆ. ಅಸ್ಸಾಂ ಫುಟ್ಬಾಲ್ ಎಸೋಸಿಯೇಶನ್ ಈ ಪಂದ್ಯವನ್ನು ಗುವಾಹಟಿಯಲ್ಲಿ ಆಯೋಜಿಸಲು ಅವಕಾಶ ನೀಡುವಂತೆ ಆಲ್ ಇಂಡಿಯಾ ಫುಟ್ಬಾಲ್ ಅಸೋಸಿಯೇಶನ್‌ಗೆ ಮನವಿ ಸಲ್ಲಿಸಿದೆ. ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲು ಅಸ್ಸಾಂ ಫುಟ್ಬಾಲ್ ಅಸೋಸಿಯೇಶನ್ ಮುಂದಾಗಿದೆ.‘‘ನಮಗೆ ವಿಶ್ವಕಪ್‌ನ ಅರ್ಹತಾ ಪಂದ್ಯಗಳ ಪೈಕಿ ಒಂದನ್ನು ಆಯೋಜಿಸಲು ಅವಕಾಶ ನೀಡುವಂತೆ ಆಲ್ ಇಂಡಿಯಾ ಫುಟ್ಬಾಲ್ ಅಸೋಸಿಯೇಶನ್‌ಗೆ ಮನವಿ ಮಾಡಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಸೆಪ್ಟಂಬರ್ 5ರಂದು ಪಂದ್ಯವನ್ನು ಆಯೋಜಿಸಲು ಅವಕಾಶ ದೊರೆಯುವ ಸಾಧ್ಯತೆ ಇದೆ’’ ಎಂದು ಎಎಫ್‌ಎ ಪ್ರಧಾನ ಕಾರ್ಯದರ್ಶಿ ಹೆಮೆನ್ ಬ್ರಹ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News