ಜಪಾನ್ ಓಪನ್: ಪ್ರಣೀತ್ ಶುಭಾರಂಭ

Update: 2019-07-23 17:45 GMT

ಟೋಕಿಯೊ, ಜು.23: ಭಾರತದ ಶಟ್ಲರ್ ಸಾಯಿ ಪ್ರಣೀತ್ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕೆಂಟೊ ನಿಶಿಮೊಟೊ ವಿರುದ್ಧ ಕೇವಲ 42 ನಿಮಿಷಗಳ ಹೋರಾಟದಲ್ಲಿ 21-17, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ನಿಶಿಮೊಟೊ ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿರುವ ಶ್ರೇಯಾಂಕರಹಿತ ಪ್ರಣೀತ್ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ ಕಾಂಟಾ ಸುನೆಯಮರನ್ನು ಎದುರಿಸಲಿದ್ದಾರೆ.

 ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸಾತ್ವಿಕ್‌ರಾಂಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಗೆಲುವಿನ ಆರಂಭ ಪಡೆದಿದ್ದಾರೆ. ಈ ಜೋಡಿ ಜರ್ಮನಿಯ ಮರ್ವಿನ್ ಸೆಡೆಲ್ ಹಾಗೂ ಲಿಂಡಾ ಎಫ್ಲೆರ್‌ರನ್ನು 21-14, 31-19 ನೇರ ಗೇಮ್‌ಗಳ ಅಂತರದಿಂದ ಸೋಲಿಸಿದರು.

 ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಸುಮೀತ್ ಬಿ.ರೆಡ್ಡಿ ಪಾಲಿಗೆ ಮಂಗಳವಾರ ಕೆಟ್ಟ ದಿನವಾಗಿ ಪರಿಣಮಿಸಿದೆ. ಅತ್ರಿ ಹಾಗೂ ರೆಡ್ಡಿ ಮಲೇಶ್ಯಾದ ಗೊಹ್ ಝಿ ಫೀ ಹಾಗೂ ನುರ್ ಇಝುದ್ದೀನ್ ಎದುರು 12-21, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News