ಲಾಸ್ ಏಂಜಲಿಸ್: ಗುಂಡು ಹಾರಾಟದಲ್ಲಿ ನಾಲ್ವರ ಹತ್ಯೆ
Update: 2019-07-26 23:06 IST
ಲಾಸ್ ಏಂಜಲಿಸ್, ಜು. 26: ಲಾಸ್ ಏಂಜಲಿಸ್‌ನ ಸ್ಯಾನ್ ಫೆರ್ನಾಂಡೊ ಕಣಿವೆಯಲ್ಲಿ ಗುರುವಾರ 12 ಗಂಟೆಗಳ ಕಾಲ ನಡೆದ ಕಾದಾಟದಲ್ಲಿ, ವ್ಯಕ್ತಿಯೊಬ್ಬ ತನ್ನ ತಂದೆ, ಸಹೋದರ ಮತ್ತು ಇತರ ಇಬ್ಬರು ಸೇರಿದಂತೆ ನಾಲ್ವರನ್ನು ಗುಂಡು ಹಾರಿಸಿ ಕೊಂದಿದ್ದಾನೆ ಹಾಗೂ ಇಬ್ಬರನ್ನು ಗಾಯಗೊಳಿಸಿದ್ದಾನೆ.
ಹತ್ಯಾಕಾಂಡ ನಡೆಸಿದ ಬಳಿಕ ಪರಾರಿಯಾದ ಆರೋಪಿ ಜೆರಿ ಡೀನ್ ಝರಗೋಝನ್ನು ಬಳಿಕ ಬಂಧಿಸಲಾಗಿದೆ.
26 ವರ್ಷದ ಆರೋಪಿ ನಡೆಸಿದ ದಾಳಿಯಲ್ಲಿ ಅವನ ತಾಯಿ ಗಾಯಗೊಂಡಿದ್ದಾರೆ.
ಆರೋಪಿಯು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟೊಂದರಲ್ಲಿ ಮುಂಜಾನೆ 2 ಗಂಟೆಯ ವೇಳೆಗೆ ಗುಂಡು ಹಾರಾಟ ಆರಂಭಗೊಂಡಿದೆ. ಇದು ಮಧ್ಯಾಹ್ನ ಒಂದು ಗಂಟೆಯವರೆಗೂ ಮುಂದುವರಿಯಿತು.
ಬಳಿಕ, ಮಧ್ಯಾಹ್ನ 2:30ರ ವೇಳೆಗೆ ಮಫ್ತಿಯಲ್ಲಿದ್ದ ಪೊಲೀಸರು ಅವನನ್ನು ಬಂಧಿಸಿದರು.