×
Ad

ವಿಮಾನ ನಿಲ್ದಾಣದಿಂದ 275 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

Update: 2019-07-26 23:14 IST

 ಸಾವೊ ಪೌಲೊ (ಬ್ರೆಝಿಲ್), ಜು. 26: ಬ್ರೆಝಿಲ್‌ನ ಸಾವೊ ಪೌಲೊ ವಿಮಾನ ನಿಲ್ದಾಣದ ಸರಕು ಟರ್ಮಿನಲ್‌ಗೆ ಗುರುವಾರ ನುಗ್ಗಿದ ಶಸ್ತ್ರಧಾರಿ ದರೋಡೆಕೋರರು ಇಬ್ಬರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡು 40 ಮಿಲಿಯ ಡಾಲರ್ (ಸುಮಾರು 275 ಕೋಟಿ ರೂಪಾಯಿ) ಮೌಲ್ಯದ ಚಿನ್ನ ಮತ್ತು ಇತರ ಅಮೂಲ್ಯ ಲೋಹವನ್ನು ದರೋಡೆ ಮಾಡಿದ್ದಾರೆ.

 ಬ್ರೆಝಿಲ್‌ನ ಫೆಡರಲ್ ಪೊಲೀಸರು ಧರಿಸುವ ಸಮವಸ್ತ್ರದಂತೆ ಕಂಡುಬರುವ ಬಟ್ಟೆ ಧರಿಸಿದ ಹಲವು ಮಂದಿ ದರೋಡೆಕೋರರು ಕಪ್ಪು ಪಿಕ್-ಅಪ್ ಟ್ರಕ್ ಒಂದರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು ಹಾಗೂ ಅವರ ಪೈಕಿ ಕನಿಷ್ಠ ಓರ್ವನಲ್ಲಿ ರೈಫಲ್ ಇತ್ತು.

 ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿದ ಅವರು, ಅಲ್ಲಿದ್ದ 750 ಕೆಜಿ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳನ್ನು ವಾಹನಕ್ಕೆ ತುಂಬಿ ಪರಾರಿಯಾದರು. ಪರಾರಿಯಾಗುವಾಗ ಅವರು ತಮ್ಮೊಂದಿಗೆ ಇಬ್ಬರು ವಿಮಾನ ನಿಲ್ದಾಣ ಉದ್ಯೋಗಿಗಳನ್ನು ಅಪಹರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News