×
Ad

ಅಸ್ಸಾಂ ನೆರೆ ಹಾವಳಿ: ಮೃತರ ಸಂಖ್ಯೆ 81ಕ್ಕೇರಿಕೆ

Update: 2019-07-27 22:02 IST

 ಗುವಾಹಟಿ, ಜು.27: ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಮುಂದುವರಿದಿದ್ದು ಶುಕ್ರವಾರ ಮತ್ತೂ ಐದು ಮಂದಿ ಸಾವನ್ನಪ್ಪುವುದರೊಂದಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 81ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ನೆರೆಯಿಂದ ಸುಮಾರು 27 ಲಕ್ಷ ಜನರು ತೊಂದರೆಗೀಡಾಗಿದ್ದು 1.5 ಲಕ್ಷಕ್ಕೂ ಹೆಚ್ಚಿನ ಜನರನ್ನು ಸ್ಥಳಾಂತರಿಸಲಾಗಿದೆ . ಕೆಳಗಿನ ಅಸ್ಸಾಂನ ಸುಮಾರು 17 ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹಪರಿಸ್ಥಿತಿ ಮುಂದುವರಿದಿದ್ದು 2000ಕ್ಕೂ ಅಧಿಕ ಗ್ರಾಮಗಳು ಜಲಾವೃತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

  ಗುರುವಾರ ಭೂತಾನ್‌ನ ಕುರಿಚ್ಚು ಜಲವಿದ್ಯುತ್ ಸ್ಥಾವರದಿಂದ ನೀರನ್ನು ಹೊರಬಿಟ್ಟಿರುವುದರಿಂದ ಅಸ್ಸಾಂನಲ್ಲಿ ಹರಿಯುವ ನದಿ ನೀರಿನ ಮಟ್ಟ ಹಠಾತ್ ಏರಿಕೆಯಾಗಿದೆ. ಜೊತೆಗೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ನದಿಗಳು ಉಕ್ಕಿ ಹರಿದು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ . ಜೊರ್ಹಾಟ್ ಮತ್ತು ಧುಬ್ರಿ ಜಿಲ್ಲೆಯಲ್ಲಿ ಬ್ರಹ್ಮಪುತ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪುಥಿಮರಿ, ಜಿಯ ಭರಲಿ ಮತ್ತು ಬೇಕಿ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ಗೆ ಕರೆ ಮಾಡಿದ ಉತ್ತರಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಅಸ್ಸಾಂ ನೆರೆ ಸಂತ್ರಸ್ತರಿಗೆ ನೆರವಾಗಲು ರಾಜ್ಯದಿಂದ 5 ಕೋಟಿ ರೂ. ಮೊತ್ತ ನೀಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News