ಪಾಕ್: ಪಂಜಾಬ್ ಪ್ರಾಂತದಲ್ಲಿ ಮತ್ತೆ ಉರ್ದುವಿಗೆ ಶಿಕ್ಷಣ ಮಾಧ್ಯಮದ ಸ್ಥಾನ

Update: 2019-07-28 18:28 GMT

ಲಾಹೋರ್,ಜು.28: ಪಾಕಿಸ್ತಾನದ ಪಂಜಾಬ್ ಪ್ರಾಂತ ಸರಕಾರವು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವಾಗಿ ಇಂಗ್ಲೀಷನ್ನು ಕೈಬಿಟ್ಟಿದೆ ಹಾಗೂ ಉರ್ದು ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಮರಳಿ ಜಾರಿಗೆ ತಂದಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಪಾಠಗಳನ್ನು ಮನವರಿಕೆ ಮಾಡಿಕೊಳ್ಳುವುದಕ್ಕಾಗಿ ಇಂಗ್ಲೀಷ್‌ನಿಂದ ಉರ್ದುವಿಗೆ ಭಾಷಾಂತರಿಸುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ, ಇದರಿಂದ ವ್ಯರ್ಥವಾಗಿ ಕಾಲಹರಣವಾಗುತ್ತದೆಯೆಂದು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಝ್‌ದಾರ್ ತಿಳಿಸಿದ್ದಾರೆ. ನೂತನ ಆದೇಶವು ಪಂಜಾಬ್ ಪ್ರಾಂತದ 60 ಸಾವಿರ ಸರಕಾರಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ.

 ಹಿಂದಿನ ಪಿಎಂಎಲ್-ಎನ್ ಸರಕಾರವು, ಬ್ರಿಟನ್‌ನ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ ಹಾಗೂ ಬ್ರಿಟಿಶ್ ಮಂಡಳಿಯ ಸಮಾಲೋಚನೆಯೊಂದಿಗೆ ಪಂಜಾಬ್‌ನ ಶಾಲೆಗಳಲ್ಲಿ ಇಂಗ್ಲೀಷನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News