ಪಾಟ್ನಾಕ್ಕೆ ರೋಚಕ ಜಯ

Update: 2019-07-29 18:34 GMT

ಮುಂಬೈ, ಜು.29: ಜೈದೀಪ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಪಾಟ್ನಾ ಪೈರೇಟ್ಸ್ ತಂಡ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 16ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 24-23 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಉಭಯ ತಂಡಗಳು ಕಳೆದೆರಡು ಪಂದ್ಯಗಳಲ್ಲಿ ತಲಾ 1ರಲ್ಲಿ ಜಯ ಸಾಧಿಸಿದ್ದವು. ಇದೀಗ ಪಾಟ್ನಾ 2ನೇ ಗೆಲುವು ತನ್ನದಾಗಿಸಿಕೊಂಡಿದೆ. ಪಾಟ್ನಾ ಪರ ಜೈದೀಪ್ 7 ಹಾಗೂ ಮೋನು 5 ಅಂಕ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದರು. ರಾಹುಲ್ ಚೌಧರಿ 5 ಹಾಗೂ ಮಂಜೀತ್ ಚಿಲ್ಲರ್ 4 ಅಂಕ ಕಲೆ ಹಾಕಿ ತಮಿಳ್ ತಂಡ ಕೊನೆಯ ತನಕ ತೀವ್ರ ಹೋರಾಟ ನೀಡಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News