×
Ad

ಬ್ಯಾಂಕ್ ಸಾಲ ವಂಚನೆ: ಬಾಸ್ಮತಿ ಅಕ್ಕಿ ಸಂಸ್ಕರಣಾ ಕಂಪೆನಿಯ 480 ಕೋ. ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Update: 2019-08-01 23:59 IST

 ಹೊಸದಿಲ್ಲಿ, ಆ. 1: ಬಹುಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿ ಪ್ರಮುಖ ಬಾಸ್ಮತಿ ಅಕ್ಕಿ ಸಂಸ್ಕರಣ ಕಂಪೆನಿ ಆರ್‌ಇಐ ಲಿಮಿಟೆಡ್‌ನ 480 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸೊತ್ತನ್ನು ಜಾರಿ ನಿರ್ದೇಶನಾಲಯ ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ.

ಜಾರಿ ನಿರ್ದೇಶನಾಲಯ ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಕಂಪೆನಿ ವಿರುದ್ಧ ಔಪಚಾರಿಕ ಮುಟ್ಟುಗೋಲು ಆದೇಶ ಜಾರಿ ಮಾಡಿದೆ.

 ಮುಟ್ಟುಗೋಲು ಹಾಕಿಕೊಳ್ಳಲಾದ 481.04 ಕೋಟಿ ರೂಪಾಯಿ ಮೌಲ್ಯದ ಸೊತ್ತು ಅಕ್ಕಿ ಮಿಲ್ ಘಟಕದ ಭೂಮಿ, ಕಟ್ಟಡ, ಯಂತ್ರಗಳು ಹಾಗೂ ಅದರ ನಿಯಂತ್ರಿತ ಕಂಪೆನಿಗಳು ನಿರ್ವಹಿಸುತ್ತಿರುವ ಕಚೇರಿ ಜಾಗ, ಆರ್‌ಇಐ ಅಗ್ರೊ ಲಿಮಿಟೆಡ್‌ನ ಗಾಳಿ ಶಕ್ತಿ ಘಟಕವನ್ನು ಒಳಗೊಂಡಿದೆ ಎಂದು ಹೇಳಿಕೆ ತಿಳಿಸಿದೆ.

ಕೋಲ್ಕತಾ ಮೂಲದ ಫೋರ್ಚೂನ್ ಗ್ರೂಪ್‌ನ ನಾಲ್ಕು ಕಂಪೆನಿಗಳಲ್ಲಿ ಇರುವ ಸ್ಥಿರ ಆಸ್ತಿ ಶೇ. 50 ಶೇರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News