ಕಾಶ್ಮೀರ ವಿವಾದ ಪರಿಹಾರಕ್ಕೆ ಮಾತುಕತೆ ದ್ವಿಪಕ್ಷೀಯ: ಜೈಶಂಕರ್

Update: 2019-08-02 17:58 GMT

ಹೊಸದಿಲ್ಲಿ, ಆ. 2: ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕಾಶ್ಮೀರ ಕುರಿತ ಯಾವುದೇ ಮಾತುಕತೆ ದ್ವಿಪಕ್ಷೀಯವಾಗಿ ಹಾಗೂ ಪಾಕಿಸ್ತಾನದೊಂದಿಗೆ ನಡೆಯಲಿದೆ ಎಂದಿದ್ದಾರೆ. ಥಾಯ್ ಲ್ಯಾಂಡ್‌ನಲ್ಲಿ ಏಷಿಯನ್ ಶೃಂಗದ ನೇಪಥ್ಯದಲ್ಲಿ ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ ಅವರನ್ನು ಭೇಟಿಯಾಗಿದ್ದರು. ''ಕಾಶ್ಮೀರ ವಿವಾದದ ಕುರಿತ ಮಾತುಕತೆ ದ್ವಿಪಕ್ಷೀಯವಾಗಿ ಹಾಗೂ ಪಾಕಿಸ್ತಾನದೊಂದಿಗೆ ಮಾತ್ರ ನಡೆಯಲಿದೆ ಎಂದು ನನ್ನ ಅಮೇರಿಕದ ಸೋದ್ಯೋಗಿ ಮೈಕ್ ಪೋಂಪಿಯೊ ಅವರಿ ತಿಳಿಸಲಾಗಿದೆ'' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಕಾಶ್ಮೀರ ವಿವಾದದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವ ವಿಷಯವನ್ನು ಟ್ರಂಪ್ ಎರಡನೇ ಬಾರಿ ಎತ್ತಿದ ಹಿನ್ನೆಲೆಯಲ್ಲಿ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಮದ್ಯಸ್ಥಿಕೆ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಚಾರ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಮಧ್ಯಸ್ಥಿಗೆ ನಡೆಸಲು ಅವರು ಈಗ ಕೂಡ ಮುಕ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾಶ್ಮೀರದ ಕುರಿತು ತನ್ನ ಮಧ್ಯಸ್ಥಿಕೆ ಆಹ್ವಾನವನ್ನು ಭಾರತ ಸ್ವೀಕರಿಸದ ಬಗೆಗಿನ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ''ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಚಾರ. (ಮಧ್ಯಸ್ಥಿಕೆ ಆಹ್ವಾನ ಸ್ವೀಕರಿಸಿವುದು)'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News