ಭಾರತದ ಕೋಚ್ ಆಗುವ ಬಯಕೆ ಇದೆ: ಸೌರವ್ ಗಂಗುಲಿ

Update: 2019-08-02 18:52 GMT

ಕೋಲ್ಕತಾ, ಆ.2: ಭವಿಷ್ಯದಲ್ಲಿ ಒಂದು ದಿನ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗುವ ಆಕಾಂಕ್ಷೆಯಿದೆ. ಆದರೆ, ಈ ಹಂತದಲ್ಲಿ ಯಾವುದೇ ಉನ್ನತ ಮಟ್ಟದ ಹುದ್ದೆಯ ಮೇಲೆ ಆಸಕ್ತಿಯಿಲ್ಲ ಎಂದು ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ.

ಭಾರತದ ವೆಸ್ಟ್‌ಇಂಡೀಸ್ ಪ್ರವಾಸ ಕೊನೆಗೊಳ್ಳುವುದರೊಂದಿಗೆ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವಧಿಯೂ ಅಂತ್ಯವಾಗಲಿದೆ. ಭಾರತದ ನೂತನ ಕೋಚ್ ಆಗಿ ಹುಡುಕಾಟ ಆರಂಭವಾಗಿದೆ.

 ‘‘ಖಂಡಿತವಾಗಿಯೂ ನನಗೆ ಕೋಚ್ ಆಗುವ ಬಯಕೆಯಿದೆ. ಇನ್ನೂ ಸ್ವಲ್ಪ ಸಮಯದಲ್ಲಿ ಆ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತೇನೆ. ಈಗ ನಾನು ಐಪಿಎಲ್, ಪಶ್ಚಿಮಬಂಗಾಳ ಕ್ರಿಕೆಟ್ ಮಂಡಳಿ, ಟಿವಿ ವೀಕ್ಷಕವಿವರಣೆ ಸಹಿತ ಹಲವು ಕ್ಷೇತ್ರಗಳಲ್ಲಿ ವ್ಯಸ್ತನಾಗಿದ್ದೇನೆ. ಈ ಎಲ್ಲವನ್ನು ಪೂರ್ಣಗೊಳಿಸಿದ ಬಳಿಕ ಕೋಚ್ ಆಗಲು ಪ್ರಯತ್ನ ನಡೆಸುವೆ’’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ 47ರ ಹರೆಯದ ಗಂಗುಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News