ವಿನೇಶ್ ಫೋಗಟ್‌ಗೆ ಮೂರನೇ ಚಿನ್ನ

Update: 2019-08-05 01:53 GMT

ವಾರ್ಸವ್, ಆ.4: ಭಾರತದ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರು ಪೊಲೆಂಡ್ ಓಪನ್ ಕುಸ್ತಿ ಟೂರ್ನಮೆಂಟ್‌ನಲ್ಲಿ 53 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸುವುದರೊಂದಿಗೆ ಸತತ ಮೂರನೇ ಚಿನ್ನ ಬಾಚಿಕೊಂಡಿದ್ದಾರೆ.

24ರ ಹರೆಯದ ಫೋಗಟ್ ಪೊಲೆಂಡ್‌ನ ಕುಸ್ತಿ ಪಟು ರೊಕ್ಸಾನರನ್ನು ಫೈನಲ್‌ನಲ್ಲಿ 3-2 ಅಂತರದಲ್ಲಿ ಬಗ್ಗು ಬಡಿದು ಚಿನ್ನಕ್ಕೆ ಕೊರಳೊಡ್ಡಿದರು.

ಇದಕ್ಕೂ ಮೊದಲು ವಿನೇಶ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ ಸ್ವೀಡನ್‌ನ ಸೋಫಿಯಾ ಮ್ಯಾಟಿನ್ಸರನ್ನು ಸೋಲಿಸಿದ್ದರು. ಈ ತಿಂಗಳಲ್ಲಿ ಮೂರನೇ ಚಿನ್ನ ಪಡೆದಿರುವ ಫೋಗಟ್ ಮ್ಯಾಡ್ರಿಡ್ ಮತ್ತು ಟರ್ಕಿ ಓಪನ್‌ನಲ್ಲಿ ಚಿನ್ನ ಬಾಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News