×
Ad

ಶ್ರೀನಗರದಲ್ಲಿ ಅಘೋಷಿತ ಕರ್ಫ್ಯೂ: ಇಂಟರ್​​ನೆಟ್​ ಸೇವೆ ರದ್ದು

Update: 2019-08-05 09:48 IST

ಶ್ರೀನಗರ, ಆ.5: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ  ರವಿವಾರ ಮಧ್ಯರಾತ್ರಿಯಿಂದ ನಿಷೇಧಾಜ್ಞೆ 144 ವಿಧಿಸಲಾಗಿದ್ದು, ರಾಜ್ಯದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಮಾಜಿ ಮುಖ್ಯ ಮಂತ್ರಿಗಳಾಧ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ  ಹಾಗೂ ಪೀಪಲ್ಸ್ ಕಾನ್ಪರೆನ್ಸ್ ಮುಖ್ಯಸ್ಥ ಸಜಾದ್ ಗನಿ ಲೊನ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. 

ಕಾಂಗ್ರೆಸ್ ನಾಯಕ ಉಸ್ಮಾನ್ ಮಜೀದ್ ಮತ್ತು ಸಿಪಿಎಂ ಶಾಸಕ  ಎಂವೈ ತಾರಿಗಾಮಿ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕಾಶ್ಮೀರದಾದ್ಯಂತ ಮೊಬೈಲ್ ಆಗಸ್ಟ್​ 15ರವರೆಗೆ ಇಂಟರ್​​ನೆಟ್​ ಸೇವೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.  ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸ್ಯಾಟಲೈಟ್ ಪೋನ್ ಗಳನ್ನುನೀಡಲಾಗಿದೆ. ಕಾಶ್ಮೀರದ ಪರಿಸ್ಥಿತಿ  ಬದಲಾಗುತ್ತಿದೆ.  ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News