ಸೌದಿ: ಪ್ರಥಮ ಮಹಿಳಾ ಕ್ರೇನ್ ಆಪರೇಟರ್‌ಗಳಿಗೆ ಪರ್ಮಿಟ್

Update: 2019-08-07 17:06 GMT

ದುಬೈ, ಆ. 7: ಸೌದಿ ಅರೇಬಿಯದ ಪ್ರಥಮ ಮಹಿಳಾ ಕ್ರೇನ್ ಆಪರೇಟರ್‌ಗಳು ಕಿಂಗ್ ಅಬ್ದುಲ್ ಅಝೀಝ್ ಬಂದರಿನಲ್ಲಿ ತಮ್ಮ ಆಪರೇಟಿಂಗ್ ಪರ್ಮಿಟ್‌ಗಳನ್ನು ಪಡೆದಿದ್ದಾರೆ ಎಂದು ದೇಶದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ಮಂಗಳವಾರ ವರದಿ ಮಾಡಿದೆ.

ಕಂಟೇನರ್ ಟರ್ಮಿನಲ್‌ಗಳಲ್ಲಿರುವ ಎಲ್ಲ ಇಲಾಖೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕಿಂಗ್ ಅಬ್ದುಲ್ ಅಝೀಝ್ ಬಂದರಿನ ಕಾರ್ಯಕ್ರಮದ ಭಾಗವಾಗಿ ಈ ಮಹಿಳೆಯರು ರಿಮೋಟ್ ಕಂಟ್ರೋಲ್ಡ್ ಕ್ರೇನ್‌ಗಳನ್ನು ಚಲಾಯಿಸುತ್ತಾರೆ.

ಈ ಬಂದರು ಜುಲೈ ತಿಂಗಳಲ್ಲಿ 2.3 ಕೋಟಿ ಟನ್ ಸರಕನ್ನು ನಿಭಾಯಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, 11.15 ಶೇಕಡದಷ್ಟು ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News