1.9 ಕೋಟಿ ವರ್ಷಗಳ ಹಿಂದಿನ 7 ಕೆ.ಜಿ. ತೂಕದ ಗಿಳಿಯ ಅವಶೇಷ ಪತ್ತೆ

Update: 2019-08-07 17:19 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಆ. 7: 1.9 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಹಾರಾಡಿದ್ದ ಬೃಹತ್ ಗಾತ್ರದ ಗಿಳಿಯೊಂದರ ಅವಶೇಷಗಳನ್ನು ನ್ಯೂಝಿಲ್ಯಾಂಡ್‌ನಲ್ಲಿ ಪತ್ತೆ ಮಾಡಲಾಗಿದೆ.

ಹಕ್ಕಿಯ ಕಾಲಿನ ಎಲುಬಿನ ಗಾತ್ರದ ಆಧಾರದಲ್ಲಿ ಲೆಕ್ಕಹಾಕುವುದಾದರೆ, ಅದು ಸುಮಾರು ಒಂದು ಮೀಟರ್ ಎತ್ತರ ಹೊಂದಿರಬಹುದು ಹಾಗೂ 7 ಕಿಲೋಗ್ರಾಂವರೆಗೆ ತೂಗಿರಬಹುದು ಎಂದು ‘ಬಯಾಲಜಿ ಲೆಟರ್’ ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಅಂತರ್‌ರಾಷ್ಟ್ರೀಯ ಹಕ್ಕಿ ತಜ್ಞರ ತಂಡವೊಂದು ಪ್ರಕಟಿಸಿದ ವರದಿ ಹೇಳಿದೆ.

‘‘ಅದು ಹಾರುತ್ತಿದ್ದಿರಬಹುದು, ಆದರೆ ಅದು ಹಾರಾಟದ ಹಕ್ಕಿ ಎಂದು ನಾವು ಪರಿಗಣಿಸುತ್ತೇವೆ’’ ಎಂದು ಕ್ಯಾಂಟರ್‌ಬರಿ ಮ್ಯೂಸಿಯಂನಲ್ಲಿರುವ ಹಿರಿಯ ನ್ಯಾಚುರಲ್ ಹಿಸ್ಟರಿ ಕ್ಯುರೇಟರ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ಬುಧವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News