ದೇಶದ ಶೇಕಡ 57ರಷ್ಟು ವೈದ್ಯರು ನಕಲಿ !

Update: 2019-08-09 04:04 GMT

ಹೊಸದಿಲ್ಲಿ : ಭಾರತದಲ್ಲಿ ವೈದ್ಯವೃತ್ತಿ ಕೈಗೊಂಡಿರುವ ಬಹುತೇಕ ಮಂದಿ ನಕಲಿ ವೈದ್ಯರೇ ? ಸರ್ಕಾರ ಇಲ್ಲ ಎಂದು ಹೇಳಿತ್ತು; ಆದರೆ ಇದೀಗ ಹೌದು ಎಂದು ಹೇಳಿದೆ.

ಭಾರತದಲ್ಲಿ ಆರೋಗ್ಯ ಸೇವೆಯಲ್ಲಿರುವ ಶೇಕಡ 57.3ರಷ್ಟು ಮಂದಿ ಅಲೋಪಥಿ ವೈದ್ಯರು, ವೈದ್ಯ ವೃತ್ತಿಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಇಲ್ಲದವರು ಎಂಬ ಆತಂಕಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ 2016ನೇ ವರ್ಷದ ವರದಿ ಬಹಿರಂಗಪಡಿಸಿತ್ತು.

ಈ ಸಂಬಂಧ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 2018ರ ಜನವರಿಯಲ್ಲಿ ಇದನ್ನು ನಿರಾಕರಿಸಿ, ಈ ವರದಿಯನ್ನು ತಳ್ಳಿಹಾಕಿದ್ದರು. ಆದರೆ ಈ ಅಂಕಿ ಅಂಶಕ್ಕೆ ಇದೀಗ ಅಧಿಕೃತ ಮನ್ನಣೆ ಸಿಕ್ಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯಡಿ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಅವಕಾಶ ನೀಡಲು ಸಮರ್ಥನೆಯಾಗಿ ಈ ಅಂಕಿ ಅಂಶವನ್ನು ಆರೋಗ್ಯ ಸಚಿವಾಲಯ ಬಳಸಿಕೊಂಡಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆ.6ರಂದು ಈ ಮಸೂದೆ ಕುರಿತಂತೆ ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇಕಡ 57.3ರಷ್ಟು ಅಲೋಪಥಿಕ್ ವೈದ್ಯರು ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿಲ್ಲ ಎಂದು ಇದರಲ್ಲಿ ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯು 2001ರ ಜನಗಣತಿ ವಿವರಗಳನ್ನು ಆಧರಿಸಿದ್ದು, ಇದರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಶೇಕಡ 20ರಷ್ಟು ವೈದ್ಯರು ಮಾತ್ರ ವೈದ್ಯಕೀಯ ಅರ್ಹತೆ ಹೊಂದಿದ್ದಾರೆ. ಅಂತೆಯೇ ಶೇಕಡ 31ರಷ್ಟು ವೈದ್ಯರು ಕೇವಲ 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News