ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಚೀನಾ ಕರೆ

Update: 2019-08-10 16:37 GMT

ಬೀಜಿಂಗ್, ಆ. 10: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿರುವ ಹಾಗೂ ಇದಕ್ಕೆ ಪ್ರತೀಕಾರವಾಗಿ ಭಾರತದೊಂದಿಗಿನ ಸಂಬಂಧವನ್ನು ಪಾಕಿಸ್ತಾನ ಕೆಳದರ್ಜೆಗೆ ಇಳಿಸಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆಗಳ ಮೂಲಕ ತಮ್ಮ ನಡುವಿನ ವಿವಾದಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಚೀನಾ ಶುಕ್ರವಾರ ಹೇಳಿದೆ.

ಕಾಶ್ಮೀರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ, ಬೀಜಿಂಗ್‌ಗೆ ಹೋಗುವ ಬೆಳಗ್ಗಿನ ವಿಮಾನವನ್ನು ಹತ್ತುತ್ತಿದ್ದಂತೆಯೇ ಚೀನಾ ಈ ಸಲಹೆ ನೀಡಿದೆ.

ಇದು, ಸಂಯಮ ವಹಿಸುವಂತೆ ಚೀನಾವು ಭಾರತ ಮತ್ತು ಪಾಕಿಸ್ತಾನಗಳಿಗೆ ವಾರದಲ್ಲಿ ನೀಡಿದ ಎರಡನೇ ಸಲಹೆಯಾಗಿದೆ.

‘‘ವಿವಾದಗಳನ್ನು ಮಾತುಕತೆಗಳು ಮತ್ತು ಸಂಧಾನಗಳ ಮೂಲಕ ಬಗೆಹರಿಸುವಂತೆ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಎತ್ತಿಹಿಡಿಯುವಂತೆ ನಾವು ಭಾರತ ಮತ್ತು ಪಾಕಿಸ್ತಾನಗಳನ್ನು ಒತ್ತಾಯಿಸುತ್ತೇವೆ’’ ಎಂದು ಚೀನಾದ ವಿದೇಶ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News