×
Ad

ಅಕ್ರಮವಾಗಿ ಉಪನಾಮ ಬದಲಿಸಿದರೆ ಶಿಕ್ಷೆ: ಕಾನೂನು ತಿದ್ದುಪಡಿಗೆ ಗೋವಾ ನಿರ್ಧಾರ

Update: 2019-08-11 19:47 IST

ಪಣಜಿ, ಆ.11: ಗೋವಾದಲ್ಲಿ ಇನ್ನು ಮುಂದೆ ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೆ ಉಪನಾಮ (ಸರ್‌ನೇಮ್) ಬದಲಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ರಾಜ್ಯದ ಕಾನೂನು ಸಚಿವ ನೀಲೇಶ್ ಕಾಬ್ರಲ್ ಹೇಳಿದ್ದಾರೆ.

‘ಹೆಸರು ಮತ್ತು ಉಪನಾಮ ಬದಲಿಸುವ ಗೋವಾ ಕಾಯ್ದೆ’ಗೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ತಿದ್ದುಪಡಿಯ ಪ್ರಕಾರ, ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೆ ಉಪನಾಮ ಬದಲಿಸಿದರೆ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ. ಗೋವನ್ನರಲ್ಲದ ಹಲವರು, ವಿಶೇಷವಾಗಿ ಒಬಿಸಿ ವರ್ಗದವರು ತಮ್ಮ ಉಪನಾಮವನ್ನು ಬದಲಿಸಿ ಸ್ಥಳೀಯರಿಗೆ ನಿಗದಿಯಾಗಿರುವ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈಗ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಹೆಸರು , ಉಪನಾಮ ಬದಲಾಯಿಸುವಾಗ ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸಲಾಗುತ್ತಿಲ್ಲ. ಈಗಿನ ತಿದ್ದುಪಡಿ ಮಸೂದೆಯ ಪ್ರಕಾಣ ಗೋವಾದಲ್ಲಿ ಜನಿಸಿರುವ ವ್ಯಕ್ತಿಗಳು ಮಾತ್ರ ಹೆಸರು, ಉಪನಾಮ ಬದಲಿಸಬಹುದು ಎಂದು ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಸದಸ್ಯ ಅಲೆಕ್ಸಿಯೊ ರೆಜಿನಾಲ್ಡೊ ಅವರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News