ಕ್ರಿಕೆಟ್ ನಿಂದ ನಿವೃತ್ತಿ ವದಂತಿಯನ್ನು ತಳ್ಳಿ ಹಾಕಿದ ಗೇಲ್

Update: 2019-08-15 08:25 GMT

ಪೋರ್ಟ್ ಆಫ್ ಸ್ಪೇನ್, ಆ.15: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್  ಕ್ರಿಸ್ ಗೇಲ್ ಭಾರತದ ವಿರುದ್ಧ ಮೂರು ಏಕದಿನ ಪಂದ್ಯಗಳ ಏಕದಿನ ಸರಣಿ ಕೊನೆಗೊಂಡ ಬೆನ್ನಲ್ಲೇ ತಮ್ಮ  ನಿವೃತ್ತಿಯ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಕ್ರಿಕೆಟ್ ನಲ್ಲಿ ಮುಂದುವರಿಯುವ  ಇಂಗಿತ ವ್ಯಕ್ತಪಡಿಸಿದ್ದಾರೆ.

ಗೇಲ್ ಮೂರನೇ ಏಕದಿನ ಪಂದ್ಯದಲ್ಲಿ 41 ಎಸೆತಗಳಲ್ಲಿ 72 ರನ್ ಗಳಿಸಿದ್ದರು. ಗೇಲ್  ಮತ್ತು ಎವಿನ್ ಲೆವಿಸ್ ಮೊದಲ ವಿಕೆಟ್ ಗೆ 115 ರನ್ ಗಳ ಜೊತೆಯಾಟ ನೀಡಿದ್ದರು.

ಭಾರತದ ಖಲೀಲ್ ಅಹ್ಮದ್ ಅವರು ಗೇಲ್ ಗೆ ಪೆವಿಲಿಯನ್ ಹಾದಿ ತೋರಿಸುತ್ತಿದ್ದಂತೆ ಇದು ಗೇಲ್ ಗೆ ಕೊನೆಯ ಅಂತರ್ ರಾಷ್ಟ್ರೀಯ ಪಂದ್ಯವಾಗಿರಬಹುದೆಂಬ ಲೆಕ್ಕಚಾರದೊಂದಿಗೆ ಕ್ರಿಕೆಟ್  ವೀಕ್ಷಣೆಗೆ ಆಗಮಿಸಿದ್ದ ಅಭಿಮಾನಿಗಳು ಎದ್ದು ನಿಂತು ಗೌರವ ಸೂಚಿಸಿದ್ದರು.

ಇದೇ ಕಾರಣಕ್ಕಾಗಿ ಭಾರತದ  ಎಲ್ಲ ಆಟಗಾರರು ಅವರತ್ತ ಆಗಮಿಸಿ ಶುಭ ಹಾರೈಸಿದ್ದರು. ಆದರೆ  ಗೇಲ್ ತನ್ನ  ನಿವೃತ್ತಿ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದ್ದಾರೆ.

39ರ ಹರೆಯದ ಗೇಲ್ 301ನೇ ಏಕದಿನ ಪಂದ್ಯದಲ್ಲಿ 10,480 ರನ್ ಸಂಪಾದಿಸಿದ್ದಾರೆ. 25 ಶತಕ ಮತ್ತು 54  ಅರ್ಧ ಶತಕ ಗಳಿಸಿದ್ದಾರೆ. ಗೇಲ್ 1999ರಲ್ಲಿ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News