ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ: ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆಗೆ ಚೀನಾ ಮನವಿ

Update: 2019-08-15 18:14 GMT

ನ್ಯೂಯಾರ್ಕ್, ಆ.15: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಭಾರತದ ಕ್ರಮದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯವಾಗಿ ಸಮಾಲೋಚನೆ ನಡೆಸಬೇಕೆಂದು ಕೋರಿ ಚೀನಾವು ಔಪಚಾರಿಕವಾಗಿ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಜಮ್ಮುಕಾಶ್ಮೀರ ವಿಷಯವಾಗಿ ಚರ್ಚಿಸುವಂತೆ ಪಾಕಿಸ್ತಾನವು ಭದ್ರತಾ ಮಂಡಳಿಯ ಹಾಲಿ ಅಧ್ಯಕ್ಷ ರಾಷ್ಟ್ರವಾದ ಪೊಲ್ಯಾಂಡ್‌ಗೆ ಪತ್ರ ಬರೆದ ಬಳಿಕ ಅದರ ಆಪ್ತರಾಷ್ಟ್ರವಾದ ಬೀಜಿಂಗ್ ಈ ಮನವಿ ಸಲ್ಲಿಸಿದೆಯೆದಂದು ವಿಶ್ವಸಂಸ್ಥೆಯ ಉನ್ನತ ರಾಜತಾಂತ್ರಿಕರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಇಂತಹ ಸಭೆಯನ್ನು ನಡೆಸುವಂತೆ ಚೀನಾವು ತೀರಾ ಇತ್ತೀಚೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ದಿನಾಂಕವನ್ನು ನಿಗದಿಪಡಿಸಲಾಗಿಲ್ಲವೆಂದು ಅವರು ಹೇಳಿದ್ದಾರೆ.

 ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿರುವ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಬೇಕೆಂದು ಪಾಕ್ ಇತ್ತೀಚೆಗೆ ಔಪಚಾರಿಕವಾಗಿ ಮನವಿ ಸಲ್ಲಿಸಿರುವುದಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಇತ್ತೀಚೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News