ದುಬೈನಲ್ಲಿ ಸಂಭ್ರಮದ ಭಾರತ ಸ್ವಾತಂತ್ರೋತ್ಸವ

Update: 2019-08-15 17:57 GMT

ದುಬೈ, ಆ.15: ವಿಶ್ವದೆಲ್ಲೆಡೆ ಭಾರತೀಯರು ಗುರುವಾರ 73ನೇ ಸ್ವಾತಂತ್ರೋತ್ಸವನ್ನು ಸಂಭ್ರಮ, ಸಡಗರದಿಂದ ಆಚರಿಸಿದ್ದಾರೆ. ದುಬೈನ ಭಾರತೀಯ ದೂತವಾಸ ಕಚೇರಿಯ ಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡ ಅನಿವಾಸಿ ಭಾರತೀಯರು, ತ್ರಿವರ್ಣ ಧ್ವಜಾರೋಹಣಕ್ಕೆ ಸಾಕ್ಷಿಯಾದರು.

  ಅಬುದಾಬಿಯಲ್ಲಿ ಮಹಾತ್ಮಗಾಂಧೀಜಿಯವರ ವಿಶೇಷ ಪ್ರತಿಮೆಯೊಂದನ್ನು ಅನಾವರಣಗೊಳಿಸಲಾಯಿತು. ಅದೇ ರೀತಿಯ ಯುಎಇನಾದ್ಯಂತ ವಿವಿಧ ಭಾರತೀಯ ಸಂಘಟನೆಗಳಿಂದ ಸ್ವಾತಂತ್ರೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಆಗೂ ಗಣನೀಯ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಸ್ವಾತಂತ್ರೋತ್ಸವದ ಸಡಗರದಲ್ಲಿ ಭಾಗವಹಿಸಿದ್ದಾರೆಂದು ಅಧಿಕೃತ ಮೂಲಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News