ಐತಿಹಾಸಿಕ ಚಿನ್ನ ಜಯಿಸಿದ ಭಾರತದ ಸೈಕ್ಲಿಸ್ಟ್ ಗಳು

Update: 2019-08-15 18:40 GMT

ಹೊಸದಿಲ್ಲಿ, ಆ.15: ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಗುರುವಾರ ನಡೆದ ವರ್ಲ್ಡ್‌ಜೂನಿಯರ್ ಟ್ರಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಸ್ಪ್ರಿಂಟ್ ವಿಭಾಗದಲ್ಲಿ ಎಸೌ ಅಲ್ಬನ್, ರೊನಾಲ್ಡೊ ಸಿಂಗ್ ಹಾಗೂ ರೊಜಿತ್ ಸಿಂಗ್ ಅವರನ್ನೊಳಗೊಂಡ ಭಾರತದ ಪುರುಷರ ತಂಡ ಚಿನ್ನದ ಪದಕವನ್ನು ಜಯಿಸಿ ಇತಿಹಾಸ ನಿರ್ಮಿಸಿದೆ.

ಜಾಗತಿಕ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತ ಇದೇ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ ಭಾರತೀಯ ತಂಡ 44.681 ಸೆಕೆಂಡ್‌ನಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಪಡೆಯಿತು. ಆಸ್ಟ್ರೇಲಿಯ ತಂಡ ಬೆಳ್ಳಿ ಹಾಗೂ ಗ್ರೇಟ್ ಬ್ರಿಟನ್ ಕಂಚಿನ ಪದಕ ತನ್ನದಾಗಿಸಿಕೊಂಡವು.

ಭಾರತದ ಪುರುಷರ ಜೂನಿಯರ್ ತಂಡ ವಿಶ್ವ ರ್ಯಾಂಕಿಂಗ್‌ನಲ್ಲೀಗ ಎರಡನೇ ಸ್ಥಾನದಲ್ಲಿದೆ. ಮಲೇಶ್ಯಾ ಮೊದಲ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News