ಬಲ ಹೆಬ್ಬೆರಳ ಗಾಯ ಗಂಭೀರವಾಗಿಲ್ಲ: ಕೊಹ್ಲಿ

Update: 2019-08-16 11:30 GMT

ಪೋರ್ಟ್ ಆಫ್ ಸ್ಪೇನ್, ಆ.15: ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಬಲ ಹೆಬ್ಬೆರಳಿಗೆ ಆಗಿರುವ ಗಾಯ ಗಂಭೀರವಾದುದಲ್ಲ. ಬೌನ್ಸರ್ ಹೊಡೆತಕ್ಕೆ ಬೆರಳಿನ ಮೂಳೆಗೆ ಏನೂ ಆಗಿಲ್ಲ. ಆಗಸ್ಟ್ 22ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ಫಿಟ್ ಇದ್ದೇನೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತ ರನ್ ಚೇಸಿಂಗ್ ಮಾಡುತ್ತಿದ್ದಾಗ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ಕೇಮರ್ ರೋಚ್ ಎಸೆದಿದ್ದ ಬೌನ್ಸರ್‌ವೊಂದು ಕೊಹ್ಲಿಯ ಬಲ ಹೆಬ್ಬೆರಳಿಗೆ ಅಪ್ಪಳಿಸಿತ್ತು. ಚೆಂಡಿನ ಏಟಿಗೆ ಕೊಹ್ಲಿಗೆ ನೋವಾಗಿರುವಂತೆ ಕಂಡುಬಂದಿತ್ತು. ಫಿಸಿಯೋ ಅವರು ಮೈದಾನಕ್ಕೆ ಧಾವಿಸಿ ಬಂದು ಚಿಕಿತ್ಸೆ ನೀಡಿದರು. ಬೆರಳ ನೋವನ್ನು ಸಹಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದ್ದ ಕೊಹ್ಲಿ ಔಟಾಗದೆ 114 ರನ್ ಗಳಿಸಿ ಭಾರತಕ್ಕೆ 6 ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು. ಈ ಗೆಲುವಿನ ಮೂಲಕ ಪ್ರವಾಸಿ ತಂಡ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News