ಜಮ್ಮು-ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷ, ವಕ್ತಾರರಿಗೆ ಗೃಹಬಂಧನ

Update: 2019-08-17 07:59 GMT

ಹೊಸದಿಲ್ಲಿ, ಆ.17: ಜಮ್ಮು-ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗುಲಾಂ ಅಹ್ಮದ್ ಮೀರ್ ಹಾಗೂ ಜಮ್ಮುವಿನ ಮತ್ತೊಬ್ಬ ಕಾಂಗ್ರೆಸ್ ನಾಯಕರಿಗೆ ಗೃಹಬಂಧನ ವಿಧಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಸರಕಾರದ ಈ ಕ್ರಮ ಹುಚ್ಚುತನದಿಂದ ಕೂಡಿದೆ ಎಂದಿದ್ದಾರೆ.

‘‘ನಮ್ಮ ಜಮ್ಮು-ಕಾಶ್ಮೀರದ ಪಿಸಿಸಿ ಅಧ್ಯಕ್ಷ ಗುಲಾಂ ನಬಿ ಅಹ್ಮದ್‌ಮೀರ್, ವಕ್ತಾರ ರವಿಂದರ್ ಶರ್ಮಾರಿಗೆ ಗೃಹಬಂಧನ ವಿಧಿಸಲಾಗಿದೆ. ಇದು ರಾಷ್ಟ್ರೀಯ ರಾಜಕೀಯ ಪಕ್ಷದ ವಿರುದ್ಧ ಅಪ್ರಚೋದಿತ ಕ್ರಮವಾಗಿದೆ. ಸರಕಾರ ಪ್ರಜಾಪ್ರಭುತ್ವದ ಮತ್ತೊಂದು ಹೊಡೆತ ನೀಡಿದೆ. ಇಂತಹ ಹುಚ್ಚುತನ ಯಾವಾಗ ಅಂತ್ಯವಾಗುತ್ತದೆ?" ಎಂದು ಟ್ವಿಟರ್‌ನಲ್ಲಿ ರಾಹುಲ್ ಪ್ರಶ್ನಿಸಿದ್ದಾರೆ.

ಮೀರ್ ಅವರನ್ನು ಜಮ್ಮುವಿನಲ್ಲಿ ಗೃಹ ಬಂಧನದಲ್ಲಿಡಲಾಗಿದ್ದು, ಅವರ ಚಲನವಲನದ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News