ಎಎಪಿ ಬಂಡಾಯ ಶಾಸಕ ಕಪಿಲ್ ಮಿಶ್ರಾ ಬಿಜೆಪಿಗೆ ಸೇರ್ಪಡೆ

Update: 2019-08-17 07:54 GMT

ಹೊಸದಿಲ್ಲಿ, ಆ.17: ಅರವಿಂದ್ ಕೇಜ್ರಿವಾಲ್ ಸರಕಾರದ ಮಾಜಿ ಸಚಿವ ಹಾಗೂ ಅನರ್ಹ ಶಾಸಕ ಕಪಿಲ್ ಮಿಶ್ರಾ ಹಾಗೂ ಎಎಪಿ ಮಹಿಳಾ ಘಟಕದ ಮುಖ್ಯಸ್ಥೆ ರಿಚಾ ಪಾಂಡೆ ದಿಲ್ಲಿಯಲ್ಲಿ ಶನಿವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾದರು.

ಈ ಇಬ್ಬರು ನಾಯಕರನ್ನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಉಪಸ್ಥಿತರಿದ್ದರು.

 ದಿಲ್ಲಿ ವಿಧಾನಸಭೆಯ ಸ್ಪೀಕರ್ ರಾಮ್‌ನಿವಾಸ್ ಗೊಯೆಲ್ ಈ ತಿಂಗಳಾರಂಭದಲ್ಲಿ ಮಿಶ್ರಾರನ್ನು ಪಕ್ಷಾಂತರ ವಿರೋಧ ಕಾನೂನಿನ ಅಡಿ ಎಎಪಿ ಪಕ್ಷದಿಂದ ಅನರ್ಹಗೊಳಿಸಿದ್ದರು. ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಪರ ಮಿಶ್ರಾ ಪ್ರಚಾರ ಮಾಡಿದ್ದಕ್ಕೆ ಈ ಕ್ರಮಕೈಗೊಳ್ಳಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News